ಹೊಸಕೋಟೆಯ ಕನಕ ಭವನದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಹೊಸಕೋಟೆ ಠಾಣೆ ಇನ್‌ಸ್ಪೆಕ್ಟರ್ ಅಶೀಕ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್ ಗುರುರಾಜ್ ಕುಲಕರ್ಣಿ, ಜಿಲ್ಲಾ ಸಹ ಕಾರ್ಯವಾಹ ಜಗದೀಶ್, ಶ್ರೀಧರ್, ಪರಮೇಶ್ ಸೇರಿ ಪ್ರೇರಣಾ ಪ್ರತಿಷ್ಟಾನದ ಪದಾಧಿಕಾರಿಗಳು ಇದ್ದರು. 
ಜಿಲ್ಲೆ

ಜೀವ ರಕ್ಷಕ ರಕ್ತದಾನ ಮಾಡಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಜೀವರಕ್ಷಕ ರಕ್ತವನ್ನು ದಾನ ಮಾಡುವ ಮೂಲಕ ಇತರರ ಜೀವಗಳನ್ನು ಉಳಿಸಿಸಬಹುದು ಎಂದು ಹೊಸಕೋಟೆ ಠಾಣೆಯ ಇನ್‌ಸ್ಪೆಕ್ಟರ್ ಅಶೀಕ್ ತಿಳಿಸಿದರು.
ನಗರದ ಕನಕ ಭವನದಲ್ಲಿ ರಾಷ್ಟ್ರೋತ್ತಾನ ರಕ್ತ ನಿಧಿ ಹಾಗೂ ನೇತಾಜಿ ರಕ್ತ ನಿಧಿಯ ಸಹಯೋಗದಲ್ಲಿ ಪ್ರೇರಣಾ ಪ್ರತಿಷ್ಟಾನದಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಪ್ರಾಂತ ಸಹ ಸೇವಾ ಪ್ರಮುಖ ಶೇಷಣ್ಣ ಮಾತನಾಡಿ, ಪ್ರತಿ ದಿನ ಅಪಘಾತದಲ್ಲಿ ನೂರಾರು ಜನ ರಕ್ತದ ಕೊರತೆಯಿಂದ ಮೃತಪಡುತ್ತಿದ್ದಾರೆ, 18 ವರ್ಷ ಮೇಲ್ಪಟ್ಟು 50 ವರ್ಷಗಳ ಆರೋಗ್ಯವಂತ ಪುರುಷ ಅಥವಾ ಮಹಿಳೆಯರು ಪ್ರತಿ ವರ್ಷಕ್ಕೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡಿದ 24 ಗಂಟೆಯೊಳಗೆ ಮತ್ತೆ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲಿದೆ, ರಕ್ತದಾನದಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.