ಚಿಕ್ಕೋಡಿ: ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ಬೇಸಿಗೆ ರಜೆಯಲ್ಲಿ ಜಾತಿಗಣತಿ ಕಾರ್ಯ ಮಾಡಿರುವ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿಎಲ್‌ಒಗಳಾಗಿ ನೇಮಿಸಿರುವ ಆದೇಶ ರದ್ದುಪಡಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾ ಘಟಕದಿಂದ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಬಿಎಲ್‌ಒಗಳಾಗಿ ನೇಮಿಸಿದ್ದರಿಂದ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಶೈಕ್ಷಣಿಕ ಗುಣಮಟ್ಟ ಕುಸಿಯುತ್ತದೆ. ಹಾಗಾಗಿ ಆದೇಶ ರದ್ದುಪಡಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಅವಕಾಶ ಮಾಡಿಕೊಡಬೇಕು. ಸರ್ಕಾರಿ ಶಾಲೆಗಳಲ್ಲಿ ಸಿಪಾಯಿ ಮತ್ತು ಸಹಾಯಕರ ಹುದ್ದೆ ಇರುವುದಿಲ್ಲ. ಹೀಗಾಗಿ ಶಿಕ್ಷಕರೇ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ ಜತೆಗೆ ಅಕ್ಷರ ದಾಸೋಹ ನಿರ್ವಹಣೆ, ಅಡುಗೆ ಸಾಮಗ್ರಿಗಳ ಖರೀದಿ ಸೇರಿ ಹಲವಾರು ಕೆಲಸ ನಿರ್ವಹಿಸಬೇಕಾದ್ದರಿಂದ ಶಿಕ್ಷಕರನ್ನು ಅನ್ಯ ಕೆಲಸಗಳಿಂದ ಮುಕ್ತಿಗೊಳಿಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ.ಎಂ.ಹಿರೇಮಠ, ಜಿಲ್ಲಾಧ್ಯಕ್ಷ ಸಿದ್ರಾಮ ಲೋಕನ್ನವರ, ಪ್ರಧಾನ ಕಾರ್ಯದರ್ಶಿ
ವೈ.ಎಸ್.ಬುಡ್ಡಗೋಳ, ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ, ಎಸ್.ಎನ್.ಬೆಳಗಾವಿ, ಎನ್.ಜಿ.ಪಾಟೀಲ, ಜಿ.ಎಂ.ಕಾಂಬಳೆ, ಎಸ್.ಎ.ಖಡ್ಡ, ಆರ್.ಕೆ.ಕಾಂಬಳೆ, ಎನ್.ಎಸ್. ಕಾಂಬಳೆ, ಡಿ.ಆರ್.ಛಲವಾದಿ, ನಿರಂಜನ ಪೂಜಾರಿ, ಎಂ.ಸಿ.ಐಹೊಳೆ, ಬಿ.ಎಲ್. ಮೂಲಿಮನಿ, ಸುಲ್ತಾನ್ ಬೀರಣ್ಣವರ, ಡಿ.ಎಚ್.ಕಾಂಬಳೆ, ವಿನೋದ ಚವ್ಹಾಣ, ಎನ್.ಎಂ.ಕುರಣೆ, ಡಿ.ಜಿ.ಕಲಾರಕೊಪ್ಪ, ಎಂ.ಎಂ.ಸಣ್ಣಕ್ಕಿ, ಸಿ.ಆರ್.ಪೂಜೇರ, ಬಿ.ಎಸ್.ವಿಭೂತಿ, ಎಂ.ಎಂ.ಪಟೇಲ್ ಇತರರು ಇದ್ದರು.