ಹುಬ್ಬಳ್ಳಿ: ಇಲ್ಲಿಯ ಚಿಕೇನಕೊಪ್ಪ ಚನ್ನವಿರ ಶರಣರ ಅಂಧರ ಆಶ್ರಮದ ಅಂಧ ವಿದ್ಯಾರ್ಥಿ ಸಚಿನ್ ಜಾಧವ್ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ.
100, 800 ಮೀಟರ್ ಓಟ ಹಾಗೂ ರಿಲೇಯಲ್ಲಿ ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಬಿಎ ದ್ವೀತಿಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಈತನ ಸಾಧನೆಗೆ ಆಶ್ರಮದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.