ಜಿಲ್ಲೆ

ದೇವರ ಸೇವೆಯಿಂದ ಬದುಕಿನಲ್ಲಿ ಆನಂದ ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ

ಮಂಗಳೂರು: ದೇವರ ಸೇವೆ ಮಾಡಿದಾಗ ಮಾತ್ರ ತೃಪ್ತಿ ಮತ್ತು ಆನಂದ ದೊರಕಲು ಸಾಧ್ಯ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು.

ಮಂಗಳೂರು ಲೇಡಿಹಿಲ್‌ನಲ್ಲಿರುವ ಎಸ್. ಎಲ್. ಶೇಟ್ ಡೈಮಂಡ್ ಹೌಸ್‌ನ ಮಾಲೀಕ ಎಂ. ರವೀಂದ್ರ ಶೇಟ್ ಕುಟುಂಬಿಕರು ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಪಾರ್ವತಿ ದೇವಿ ಅಮ್ಮನವರಿಗೆ ಕೊಡುಗೆಯಾಗಿ ನೀಡಿದ ಸ್ವರ್ಣ ಮೂಗುತಿ ಸಮೇತ ರಜತ ಕವಚ ಸಮರ್ಪಣಾ ಸೇವಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಕಾಮತ್ ಮೆಡಿಕಲ್ ಸೆಂಟರ್‌ನ ಡಾ. ಅನಂತ ಕಾಮತ್ ಕಾಸರಗೋಡ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದೇವಳದ ಕಾರ‌್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್, ನಿವೃತ ಪ್ರಬಂಧಕರು ವಿಜಯ ಬ್ಯಾಂಕ್ ಅಮ್ಮು ರೈ ಚಟ್ಲಗುತ್ತು, ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ, ಕ್ಷೇತ್ರದ ಸುಧಾಕರ ಕೊಟೆ ಕುಂಜತ್ತಾಯರು, ಶಾರದ ವಿದ್ಯಾಲಯದ ನಿರ್ದೇಶಕರಾದ ಸುಧಾಕರ ರಾವ್ ಪೇಜಾವರ, ಚಲನಚಿತ್ರ ನಟ ಕಾಸರಗೋಡು ಚಿನ್ನಾ, ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಕೆ.ಕೆ. ಶ್ಯಾನುಭಾಗ್, ಕೇರಳ ತಂತ್ರ ವಿದ್ಯಾಪೀಠದ ಮಲ್ಲಿಪ್ಪಳ್ಳ ಕೃಷ್ಣ ನಂಬೂದ್ರಿ, ಸಂಜೀವ ಶೆಟ್ಟಿ, ಶರತ್ ಶೇಟ್, ದೀಪ್ತಿ ಶೇಟ್, ಪ್ರಸಾದ್ ಶೇಟ್, ದಿವ್ಯಾ ಶೇಟ್, ಶಿವಾನಿ ಶೇಟ್, ವಿರಾಜ್ ಶೇಟ್ ಉಪಸ್ಥಿತರಿದ್ದರು.

ಸುಮಾರು 3.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಶೇಟ್ ಕುಟುಂಬಿಕರು ಸಮರ್ಪಿಸಿದರು. ಸ್ಥಳೀಯ ಮಾತೃಮಂಡಳಿಯ 60 ಜನರಿಗೆ ದೇವಿಯ ಪ್ರಸಾದ ರೂಪವಾಗಿ ಸೀರೆ ವಿತರಿಸಲಾಯಿತು. ಕೂಡ್ಲು ವಿಠಲ ಶೆಟ್ಟಿಯವರು ಭಕ್ತಿ ಗೀತೆ ಹಾಡಿದರು. ಸಾರ್ವಜನಿಕ ಅನ್ನದಾನ ನೆರವೇರಿತು.