ಪಡುಬಿದ್ರಿ: ಉಡುಪಿ ಶ್ರೀಕೃಷ್ಣ ಮಠದ ಲಕ್ಷದೀಪ ಅಂಗವಾಗಿ ಶನಿವಾರ ತುಳಸಿ ಸಂಕೀರ್ತನಾ ಸೇವೆ ನಡೆಸಿಕೊಟ್ಟ ತರಂಗಿಣಿ ಮಿತ್ರ ಮಂಡಳಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಸುಗುಣೇಂದ್ರ ಶ್ರೀಗಳು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ಪಿ. ರಮಾಕಾಂತ್ ರಾವ್, ಕಾರ್ಯದರ್ಶಿ ವೈ. ಗಣೇಶ್ ರಾವ್ ಕೋಶಾಧಿಕಾರಿ ಗೋವಿಂದ ರಾವ್, ಸದಸ್ಯರಾದ ಬಾಲಪ್ಪ ರಾಮಚಂದ್ರ ರಾವ್, ಕಿನ್ನಂಕರ ನಾರಾಯಣ ರಾವ್, ಹರೀಶ್ ರಾವ್, ಅಕಾಲಿ ಸುರೇಶ್ ರಾವ್, ಪಿ.ಕೆ. ಚಂದ್ರಶೇಖರ ರಾವ್ ಮತ್ತಿತರರಿದ್ದರು.