BLDE launches City Medical Center 
ಜಿಲ್ಲೆ

ಬಿಎಲ್​ಡಿಇ ವತಿಯಿಂದ ಸಿಟಿ ಮೆಡಿಕಲ್​ ಸೆಂಟರ್​ ಆರಂಭ

ಗಿರೀಶ ಸಗರ

ವಿಜಯಪುರ: ನಗರದ ಜನರ ಅನುಕೂಲಕ್ಕಾಗಿ ಸಿಟಿ ಮೆಡಿಕಲ್​ ಸೆಂಟರ್​ ಮತ್ತು ಲಾಂಡ್ರಿ ಪ್ರಾರಂಭಿಸಲಾಗಿದೆ ಎಂದು ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಉಪಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ ಹೇಳಿದರು.

ನಗರದ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ವತಿಯಿಂದ ಯುಗಾದಿ ಹಬ್ಬದ ದಿನ ಶನಿವಾರ ಪ್ರಾರಂಭಿಸಿದ ಸಿಟಿ ಮೆಡಿಕಲ್​ ಸೆಂಟರ್​ ಮತ್ತು ಲಾಂಡ್ರಿ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಪಾಟೀಲ ಪ್ಲಾನೆಟ್​ ಪಕ್ಕದಲ್ಲಿ ಆರಂಭವಾದ ಸಿಟಿ ಮೆಡಿಕಲ್​ ಸೆಂಟರ್​ನಲ್ಲಿ ಎಲ್ಲ ವೈದ್ಯಕಿಯ ಸೇವೆಗಳು ಲಭ್ಯವಿವೆ. ಮುಂಬರುವ ದಿನದಲ್ಲಿ ದಂತ ವೈದ್ಯಕಿಯ ಚಿಕಿತ್ಸೆ, ಸುಸಜ್ಜಿತ ಲ್ಯಾಬ್​, ಡೈಗ್ನೊಸ್ಟಿಕ್​ ವ್ಯವಸ್ಥೆ ಹಾಗೂ ಫಿಜಿಯೋಥೆರಪಿ ಪ್ರಾರಂಭವಾಗಲಿದೆ. ಅಲ್ಲದೆ, ಮನೆಯಲ್ಲಿರುವ ರೋಗಿಗಳಿಂದ ರಕ್ತ ಸಂಗ್ರಹಿಸಿ ತಪಾಸಣೆ ಮಾಡಿಕೊಡುವ ಹೋಮ್​ ಸರ್ವಿಸ್​ ಒದಗಿಸಲು ಚಿಂತನೆ ನಡೆದಿದ್ದು, ಒಟ್ಟಾರೆ ಈ ಭಾಗದ ಜನರ ಅನುಕೂಲಕ್ಕಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಬಿಎಲ್​ಡಿಇ ಆಸ್ಪತ್ರೆಯ ವೈದ್ಯಕಿಯ ಅಧೀಕ ಡಾ. ಆರ್​.ಎಂ. ಹೊನ್ನುಟಗಿ, ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ನೇತ್ರವಿಾನ ವಿಭಾಗದ ಪ್ರಾಧ್ಯಾಪಕ ಡಾ. ಸುನೀಲ ಬಿರಾದಾರ, ವಿಧಿವಿಾನ ವಿಭಾಗದ ಪ್ರಾಧ್ಯಾಪಕ ಡಾ. ಉದಯಕುಮಾರ ನುಚ್ಚಿ, ಶಸಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ. ದಯಾನಂದ ಬಿರಾದಾರ, ವೈದ್ಯಾಧಿಕಾರಿ ಡಾ. ಅಶೋಕ ತರಡಿ ಮತ್ತಿತರರಿದ್ದರು. ಸಿಟಿ ಮೆಡಿಕಲ್​ ಸೆಂಟರ್​ನಲ್ಲಿ ಅತ್ಯಾಧುನಿಕ ಸೌಲಭ್ಯಗಳ, ಸಾಮಾನ್ಯ ಸಮಾಲೋಚನೆಗಳು, ರೋಗರ್ನಿಣಯ ಸೇವೆಗಳು ಮತ್ತು ಡೇ ಕೇರ್​ ಚಿಕಿತ್ಸೆಗಳು ಸೇರಿದಂತೆ ಸಮಗ್ರ ಆರೋಗ್ಯ ಸೇವೆಗಳು ಲಭ್ಯವಿವೆ. ಅಲ್ಲದೇ, ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿ ಆರೋಗ್ಯ ಸೇವೆ ಸಿಗಲಿದೆ. ವೈದ್ಯಕಿಯ ಕೇಂದ್ರದ ಜತೆಗೆ, ಉನ್ನತ ದರ್ಜೆಯ ಸುಸಜ್ಜಿತ ಲಾಂಡ್ರಿ ಕೂಡ ಇಲ್ಲಿದ್ದು, ಅತ್ಯಾಧುನಿಕ ಉಪಕರಣಗಳು ಮತ್ತು ಪರಿಸರ ಸ್ನೇಹಿ ಸ್ವಚ್ಛತಾ ಸೌಲಭ್ಯಗಳನ್ನು ಇದು ಒಳಗೊಂಡಿದೆ.