ಜಿಲ್ಲೆ

ಹರಿಹರ ಪಲ್ಲತ್ತಡ್ಕದಲ್ಲಿ ಭೀಕರ ಸದ್ದು

ಮಂಗಳೂರು: ಸುಳ್ಯದ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಹರಿಹರ ಪಲ್ಲತ್ತಡ್ಕದಲ್ಲಿ ಭಾನುವಾರ ರಾತ್ರಿ ಹತ್ತು ಗಂಟೆ ವೇಳೆಗೆ ಭೀಕರ ಸದ್ದು ಕೇಳಿ ಬಂದಿದ್ದು,ಜನತೆ ಬೆಚ್ಚಿ ಬಿದ್ದಿದ್ದಾರೆ.

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಂತೆ ಸದ್ದು ಕೇಳಿ ಬಂದಿದ್ದು ಜನರು ಅದರ ಮೂಲವನ್ನು ಹುಡುಕಲು ಆರಂಭಿಸಿದ್ದಾರೆ. ಹೈಸ್ಕೂಲ್ ಕಡೆಯಿಂದ ಶಬ್ಧ ಕೇಳಿ ಬಂದಿದೆ. ಭೂಮಿ ನಡುಗಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಬ್ಧ ಕೇಳಿ ಬಂದ ಬಳಿಕ ಪೇಟೆಯಲ್ಲಿ ನೂರಾರು ಜನ ಸೇರಿ ಶಬ್ಧ ಏನೆಂದು ಚರ್ಚೆ ನಡೆಸಿದರು. ಇದುವರೆಗೆ ಅದರ ಮೂಲ ಪತ್ತೆಯಾಗಿಲ್ಲ.