ಜಿಲ್ಲೆ

ವೈಶುದೀಪ ಫೌಂಡೇಷನ್‌ನಿ೦ದ ಜಿಲ್ಲಾಸ್ಪತ್ರೆಗೆ ಹೊದಿಕೆ ವಿತರಣೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಾಸಕ ವಿನಯ ಕುಲಕರ್ಣಿ ಅವರ ಜನ್ಮದಿನದ ಪ್ರಯುಕ್ತ ವೈಶುದೀಪ ಫೌಂಡೇಷನ್‌ನಿ0ದ ಜಿಲ್ಲಾಸ್ಪತ್ರೆಗೆ ಸೋಮವಾರ ಹಾಸಿಗೆ, ಹೊದಿಕೆಗಳನ್ನು ವಿತರಿಸಲಾಯಿತು.

ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 350 ಹೊದಿಕೆ ಹಾಗೂ 350 ಹಾಸಿಗೆಗಳನ್ನು ವೈಶುದೀಪ ಪೌಂಡೇಷನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅವರು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಸಂಗಪ್ಪ ಗಾಬಿ ಅವರಿಗೆ ಹಸ್ತಾಂತರಿಸಿದರು.

ಈ ವೇಳೆ ಶಿವಲೀಲಾ ಕುಲಕರ್ಣಿ ಮಾತನಾಡಿ, ಶಾಸಕ ವಿನಯ ಕುಲಕರ್ಣಿ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿತ್ತು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಹಾಸಿಗೆ ಮತ್ತು ಹೊದಿಕೆಗಳ ಕೊರತೆ ಕಂಡು ಬಂದಿತ್ತು. ಹೀಗಾಗಿ ಹಾಸಿಗೆ ಮತ್ತು ಹೊದಿಕೆ ನೀಡಲಾಗಿದೆ. ಈ ಹಿಂದೆ ವೈಶುದೀಪ ಪೌಂಡೇಷ್‌ನ್‌ನಿ0ದ ಜಿಲ್ಲಾಸ್ಪತ್ರೆಗೆ 5 ಆಂಬುಲೆನ್ಸ್ಗಳನ್ನು ನೀಡಲಾಗಿತ್ತು. ಜನರ ಆರೋಗ್ಯಕ್ಕೆ ಸಂಬAಽಸಿ ಮುಂದೆಯೂ ಅಗತ್ಯ ನೆರವು ನೀಡಲಾಗುವುದು ಎಂದರು.

ಜಿಲ್ಲಾ ಸರ್ಜನ್ ಡಾ. ಸಂಗಪ್ಪ ಗಾಬಿ ಮಾತನಾಡಿ, ಶಾಸಕ ವಿನಯ ಕುಲಕರ್ಣಿ ಅವರು ಜಿಲ್ಲಾಸ್ಪತ್ರೆಯ ಅಭಿವೃದ್ಧಿಗಾಗಿ ಅಗತ್ಯ ಅನುದಾನ ನೀಡಿದ್ದಾರೆ. ವೈಶುದೀಪ ಪೌಂಡೇಷನ್‌ನಿ0ದ ಹೊದಿಕೆ ಮತ್ತು ಹಾಸಿಗೆ ನೀಡಿದ್ದು ಶ್ಲಾಘನೀಯ ಎಂದರು.

ಅರವಿ0ದ ಏಗನಗೌಡರ, ರಾಜಶೇಖರ ಕಮತಿ, ದೀಪಾ ನೀರಲಕಟ್ಟಿ, ಚನ್ನಬಸಪ್ಪ ಮಟ್ಟಿ, ನಾಗಪ್ಪಮಾದರ, ಶಿವು ಮೆಣಸಿನಕಾಯಿ, ಶಿವಾನಂದ ಗಿರಿಯಪ್ಪನವರ, ಪರಮೇಶ್ವರ ಕಾಳೆ, ಕರೆಪ್ಪಮಾದರ, ಕಿಶೋರ ಬಡಿಗೇರ, ಕೃಷ್ಣ ರಾನೋಜಿ, ಸುರೇಶ ಸುಣಗಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.