ಜಿಲ್ಲೆ

ಫೇಸ್ ಬುಕ್ ಗೆಳೆಯನಿಂದ ವೈದ್ಯಗೆ ಬ್ಲಾಕ್ ಮೇಲ್

ಆರ್.ಕೃಷ್ಣ

ಮೈಸೂರು: ಫೇಸ್‌ಬುಕ್ ಮೂಲಕ ಪರಿಚಯವಾಗಿ ವೈದ್ಯೆಯೊಂದಿಗೆ ಸಲುಗೆ ಹೊಂದಿದ್ದ ಯವಕ, ಆಕೆ ಮದುವೆ ಅಗಲು ನಿರಾಕರಿಸಿದ್ದರಿಂದ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬ್ಲಾಕ್‌ಮೇಲ್ ಮಾಡಿದ್ದಾನೆ.

ಬನ್ನಿಮಂಟಪ ವಾಸಿ ವೈದ್ಯೆ ನೀಡಿದ ದೂರಿನ ಮೇರೆಗೆ ಆರೋಪಿ ಉಸ್ಮಾನ್ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್ ಮೂಲಕ ಉಸ್ಮಾನ್ ಎಂಬಾತನ ಪರಿಚಯವಾಗಿದ್ದು, ನಂತರ ಇಬ್ಬರು ಸ್ನೇಹಿತರಾಗಿದ್ದೆವು. ಆದರೆ ಆತ ನನ್ನನ್ನು ಮದುವೆಯಾಗುವುದಾಗಿ ಒತ್ತಡ ಹೇರಿದ್ದರಿಂದ ನಿರಾಕರಿಸಿದ್ದಕ್ಕೆ ನಿನ್ನ ಖಾಸಗಿ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.