ಜಿಲ್ಲೆ

ಸುಳ್ಳು, ಜೊಳ್ಳು ಪತ್ರಕರ್ತರಿದ್ದಾರೆ... !

ಜಗನ್ನಾಥ್ ಕಾಳೇನಹಳ್ಳಿ

ಸುಳ್ಳು, ಜೊಳ್ಳು, ಬ್ಲಾಕ್​ ಮೇಲ್​ ಪತ್ರಕರ್ತರು ನಮ್ಮ ನಡುವೆ ಇದ್ದಾರೆ. ಅವರನ್ನು ಸ್ವಚ್ಛಗೊಳಿಸುವ ಕೆಲಸ ನಾವೇ ಮಾಡಬೇಕಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಪತ್ರಿಕಾ ವೃತ್ತಿ ಶ್ರೇಷ್ಠವಾದ ವೃತ್ತಿ. ಈ ವೃತ್ತಿ ನತೆ ಕುಂದಿಸುತ್ತಿರುವ ಕ್ರಿಮಿನಲ್​ ಪತ್ರಕರ್ತರನ್ನು ಪತ್ರಿಕಾರಂಗದಿಂದಲೇ ಹೊರಗಿಡಬೇಕು. ಆ ಕೆಲಸವನ್ನು ಜಿಲ್ಲಾ, ತಾಲೂಕು ಟಕಗಳು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಕ್ರೀಯ, ನೈಜ ಪತ್ರಕರ್ತರನ್ನು ಗುರುತಿಸಬೇಕಾದ ಜವಾಬ್ದಾರಿ ನಮ್ಮದು ಎಂದರು.

ಸಮ್ಮೇಳನಕ್ಕೆ 40 ಲಕ್ಷ ರೂ., ನೆರವು

ರಾಜ್ಯ ಸಮ್ಮೇಳನಕ್ಕೆ ಈ ಹಿಂದೆ 15 ಲಕ್ಷ ರೂ., ನೆರವನ್ನು ಸರ್ಕಾರ ನೀಡುತ್ತಿತ್ತು. ಅದನ್ನು 20 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಮತ್ತೊಮ್ಮೆ ನಾವೆಲ್ಲಾ ಗೃಹ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ನೇತೃತ್ವದಲ್ಲಿ ಹೆಚ್ಚಿನ ನೆರವು ಕೇಳಿದಾಗ 40 ಲಕ್ಷ ರೂ., ನೆರವು ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು ಎಂದು ತಗಡೂರು ಕೃತಜ್ಞತೆ ಸಲ್ಲಿಸಿದರು.