ಕಂಪ್ಲಿ: ಶ್ರೀರಾಮರಂಗಾಪುರ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಕರಿ ಕೋತಿ ದಾಳಿಗೆ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದರಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ. ಬೋನಿಗೆ ಬೀಳದ ಕರಿಕೋತಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ಕೋತಿಯ ಕುಚೇಷ್ಟೆಗೆ ಬೇಸತ್ತ ಚಾಲಕರು
ಕೋತಿ ಗ್ರಾಮಸ್ಥರಾದ ವಡ್ರು ಗೋವಿಂದ, ಹನುಮಂತ, ರಾಮು, ನರೇಶ್ ಇತರರ ಕೈ ಮತ್ತು ಕಾಲಿಗೆ ಕಚ್ಚಿದೆ. ಇನ್ನು ಕೆಲವರಿಗೆ ಬಲವಾಗಿ ಕಚ್ಚಿರುವುದರಿಂದ ಬಳ್ಳಾರಿ ಬಿಮ್ಸ್‌ಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಇದಕ್ಕೂ ಮುನ್ನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಇದೇ ಕೋತಿ ಕೆಲವರನ್ನು ಕಚ್ಚಿ ಗಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕೋತಿ ಸೆರೆಗೆ ಸುಗ್ಗೇನಹಳ್ಳಿ ಗ್ರಾಮದಲ್ಲಿ ಬೋನು ಅಳವಡಿಸಲಾಗಿತ್ತು. ಆದರೆ, ಕೋತಿ ಬೋನಿಗೆ ಬಿದ್ದಿರಲಿಲ್ಲ.
ಹೊಸಪೇಟೆ ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಕರಿಕೋತಿ ಸೆರೆಗೆ ಬಲೆ ಬೀಸಿದರೂ ಸಫಲರಾಗಲಿಲ್ಲ. ಕೋತಿಯನ್ನು ಸೆರೆ ಹಿಡಿದು ದೂರ ಸಾಗಿಸಲಾಗುವುದು ಎಂದು ಸುಗ್ಗೇನಹಳ್ಳಿ ಗ್ರಾಪಂ.ಪಿಡಿಒ ಕೆ.ಎಚ್.ಶಶಿಕಾಂತ್ ತಿಳಿಸಿದ್ದಾರೆ.