ಮಡಿಕೇರಿ: ವಿಶ್ವ ಟೇಕ್ವಾಂಡೋ ಫೆಡರೇಷನ್ ಸಂಸ್ಥೆ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಡಿಕೇರಿಯಲ್ಲಿರುವ ಕೂರ್ಗ್ ಟೇಕ್ವಾಂಡೋ ಶಾಲೆಯ ವಿಧ್ಯಾರ್ಥಿ ತೆನ್ನಿರ ಶಾನ್ ಪೊನ್ನಪ್ಪ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.
ಡಬ್ಲ್ಯೂಟಿಎಫ್ ಅಂತರಾಷ್ಟ್ರೀಯ ಸಂಸ್ಥೆ ನೀಡಿರುವ ಪ್ರಮಾಣ ಪತ್ರವನ್ನು ಮಡಿಕೇರಿಯಲ್ಲಿರುವ ಕೂರ್ಗ್ ಟೇಕ್ವಾಂಡೋ ಸಂಸ್ಥೆಯ ಮುಖ್ಯ ತರಬೇತುದಾರರಾದ ಲೋಕೇಶ್ ರೈ ಹಾಗೂ ಅಂತರಾಷ್ಟ್ರೀಯ ತರಬೇತುದಾರ ಡೆಕ್ಕನ್ ಟೇಕ್ವಾಂಡೋ ಸಂಸ್ಥೆಯ ಗ್ರಾಂಡ್ ಮಾಸ್ಟರ್ ಎಚ್.ಮುತ್ತಪ್ಪ ಲಕ್ಷಣ್‌ರವರು ವಿತರಿಸಿದರು.
ಮಡಿಕೇರಿ ತಾಲೂಕಿನ ಅರ್ವತ್ತೊಕ್ಲು ಗ್ರಾಮದ ತೆನ್ನಿರ ಮೈನ ಜೋಯಪ್ಪ ಹಾಗೂ ಬಬಿತ ದಂಪತಿಯರ ಪುತ್ರನಾಗಿರುವ ಶಾನ್ ಪೊನ್ನಪ್ಪ ಮಡಿಕೇರಿ ಸಂತ ಮೈಕಲರ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.