ಚಿತ್ರದುರ್ಗ: ಜಿಲ್ಲೆ ಎಲ್ಲ ಬೂತ್‌ಗಳಲ್ಲೂ ಜ.21ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯ 1648 ಬೂತ್‌ಗಳಲ್ಲಿ ನಡೆಯಲಿರುವ ಈ ಕಾರ‌್ಯಕ್ರ ಮಕ್ಕೆ 21ರಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ‌್ಯದರ್ಶಿ ಬಿ.ಎಲ್.ಸಂತೋಷ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಅಂದು ಸಂತೋಷ್ ಅವರು ಶಕ್ತಿ ಕೇಂದ್ರ,9 ಮಂಡಲ ಹಾಗೂ ಸಹಿತ ಅಪೇಕ್ಷಿತ ಪ್ರಮುಖ ಕಾರ‌್ಯಕರ್ತರ ಸಭೆ ನಡೆಸಲಿದ್ದು,ಬೂತ್‌ಗೆ ಚಾಲನೆ ನೀಡುವ ಹಾಗೂ ಸಭೆ ನಡೆಯುವ ಸ್ಥಳ ಮತ್ತು ಸಮಯವನ್ನು ನಂತರದಲ್ಲಿ ಪ್ರಕಟಿಸಲಾಗುವುದು.
ಅಭಿಯಾನದ ವೇಳೆ ಪ್ರತಿ ಬೂ ತ್‌ನ 150ಕ್ಕೂ ಹೆಚ್ಚು ಮನೆಗಳಿಗೆ ಕೇಂದ್ರ,ರಾಜ್ಯಸರ್ಕಾರಗಳ ಸಾಧನೆ, ಮೂರು ಸ್ಟಿಕ್ಕರ್ ಹಾಗೂ 50-60 ಮನೆಗಳ ಮೇಲೆ ಗೋಡೆ ಬರಹ ಬರೆಯಲಾಗುವುದು.
29ರಂದು ಅಭಿಯಾನದ ಸಮಾರೋಪ,ಮನ್‌ಕೀಬಾತ್ ವೀಕ್ಷಣೆ ಹಾಗೂ ಸದಸತ್ವ ಅಭಿಯಾನವೂ ನಡೆಯಲಿದೆ ಎಂದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಕುಡಾ ಅಧ್ಯಕ್ಷ ಸುರೇಶ್ ಸಿದ್ದಾಪುರ,ನರೇಂದ್ರ,ಕಲ್ಲೇಶಯ್ಯ,ನಾಗರಾಜ್ ಬೇದ್ರೆ,ನಗರಸಭೆ ಸದಸ್ಯ ಹರೀಶ್ ಇದ್ದರು.