ಎಚ್.ಡಿ.ಕೋಟೆ: ತಳಮಟ್ಟದಿಂದ ಪಕ್ಷ ಸಂಘಟಿಸಲು ‘ನಮ್ಮ ನಡೆ ಬೂತ್‌ನ ಕಡೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ದುಡಾಡಳಿತ ಹಾಗೂ ಹಗರಣಗಳು ಮಿತಿಮೀರಿದ್ದು, ಬಿಜೆಪಿ ಇದನ್ನ ಪ್ರಬಲವಾಗಿ ಖಂಡಿಸುತ್ತಾ ಬಂದಿದೆ. ಇದನ್ನು ಜನರಿಗೆ ಮನವರಿಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಸಲು ತಳಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಮಾಡಲಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಆಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿಯಲಿದೆ ಎಂದರು.
ಮಾಜಿ ಶಾಸಕ ಬಾಲರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳುವವರಿಗೆ, ಗೌರವ ಸಿಗುವುದಿಲ್ಲ. ಕಾಂಗ್ರೆಸ್ ತಮ್ಮ ಆಡಳಿತಕೋಸ್ಕರ ಜಾತಿಗಳಲ್ಲಿ ಒಡಕು ಮೂಡಿಸುವ ಕೆಲಸಗಳನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ನಿವೃತ್ತ ನ್ಯಾಯಾೀಶ ನಾಗಮೊಹನ್ ದಾಸ್ ನೇತೃತ್ವದಲ್ಲಿ, ಪರಿಶಿಷ್ಟ ಜಾತಿ ಗಣತಿ ನಡೆಸಿ, ಸರ್ಕಾರಕ್ಕೆ ವರದಿ ನೀಡಿದ್ದು, ಇದರ ಬಗ್ಗೆ ಕೂಡ ಅಪಸ್ವರ ಕೇಳಿ ಬರುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕೋಟೆ, ಸರಗೂರು ತಾಲೂಕು ಬಿಜೆಪಿ ಅಧ್ಯಕ್ಷರಾದ ಶಂಭೇಗೌಡ, ಗುರುಸ್ವಾಮಿ, ಮುಖಂಡರಾದ ಸುರೇಶ್ ಬಾಬು, ಮೊತ್ತ ಬಸವರಾಜಪ್ಪ, ವೆಂಕಟಸ್ವಾಮಿ, ರುದ್ರಪ್ಪ, ಗಿರೀಶ್, ರಾಜು, ಗುರುಸ್ವಾಮಿ, ಸೈಯದ್ ಅಕ್ರಂ, ಬಸವರಾಜು ಇತರರು ಇದ್ದರು.