ಕಾರ್ಕಳ: ದೇಶದ ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಹಲವು ಕಾಲಗಳಿಂದ ವಿದ್ಯಾರ್ಥಿಗಳಿಗೆ ತಿಳಿಸುವಲ್ಲಿ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ. ಭಾರತೀಯ ಜನತಾ ಪಾರ್ಟಿ ಒಂದು ರಾಜಕೀಯ ಪಕ್ಷವಾಗಿ ಕೇವಲ ಅಧಿಕಾರಕ್ಕಾಗಿ ಚುನಾವಣಾ ಸಂದರ್ಭದಲ್ಲಿ ವಾತ್ರ ಕೆಲಸ ವಾಡದೆ ದೇಶವನ್ನು ಸಾಂಸ್ಕೃತಿಕ ರಾಷ್ಟ್ರವನ್ನಾಗಿ ಕಟ್ಟುವಲ್ಲಿ ನಿರಂತರ ಚಟುವಟಿಕೆಗಳನ್ನು ವಾಡುತ್ತದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು. ಕಾರ್ಕಳ ಬಿಜೆಪಿ ಬೆಳ್ಮಣ್ ಮಹಾಶಕ್ತಿ ಕೇಂದದ ಮಹಿಳಾ ಮೋರ್ಚಾ ವತಿಯಿಂದ ಬೆಳ್ಮಣ್ ಶ್ರೀಕೃಷ್ಣ ಸಭಾಂಗಣದಲ್ಲಿ ರಾಣಿ ಅಬ್ಬಕ್ಕ ಜಯಂತಿ ಪ್ರಯುಕ್ತ ಕಾರ್ಕಳದ ಹೈಸ್ಕೂಲು ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಭಾಷಣ, ಚಿತ್ರಕಲಾ ಸ್ಪರ್ಧೆ ಬಹುವಾನ ವಿತರಣಾ ಕಾರ್ಯಕ್ರಮದಲ್ಲಿ ವಾತನಾಡಿದರು. ಕಾರ್ಕಳ ಶಾಸಕ ವಿ.ಸುನೀಲ್ ಕುವಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಬೋಳ ಸತೀಶ್ ಪೂಜಾರಿ, ಮಹಾ ಶಕ್ತಿಕೇಂದ್ರದ ಅಧ್ಯಕ್ಷ ದೇವೇಂದ್ರ ಶೆಟ್ಡಿ, ರವೀಂದ್ರ ಕುವಾರ್, ಸೂರ್ಯಕಾಂತ ಶೆಟ್ಟಿ, ಜಯರಾಂ ಸಾಲಿಯಾನ್, ಬಾಲಕಷ್ಣ ಹೆಗ್ಡೆ, ಪ್ರವೀಣ್ ಸಾಲಿಯಾನ್, ಪ್ರಮುಖರಾದ ಶುಭಾ ಪಿ ಶೆಟ್ಟಿ, ರೀನಾ ಜ್ಯೋತಿ, ರಾಮೇಶ್ವರಿ ಶೆಟ್ಟಿ, ಜೆರಾಲ್ಡ್ ಡಿಸೋಜ, ಮಮತಾ ಶೆಟ್ಟಿ, ಮಲ್ಲಿಕಾ ರಾವ್, ವಿಶಾಲ ಪೂಜಾರಿ, ವನಿತಾ ಪೂಜಾರಿ, ಲಕ್ಷ್ಮೀ ಶೆಟ್ಟಿ, ರಜನಿ ಶೆಟ್ಟಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಪ್ರಸ್ತಾವಿಸಿದರು. ವಿನಯಾ ಬಂಗೇರಾ ಸ್ವಾಗತಿಸಿ, ಆಶಾ ದೇವೇಂದ್ರ ಶೆಟ್ಟಿ ನಿರೂಪಿಸಿದರು.