ಜಿಲ್ಲೆ

ಬಿಜೆಪಿ ಯುವ ಮೋರ್ಚಾ ಮ್ಯಾರಥಾನ್ 21ಕ್ಕೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಜನ್ಮ ದಿನದ ಅಂಗವಾಗಿ ಸೆ. 21ರಂದು ಬಿಜೆಪಿ ಯುವ ಮೋರ್ಚಾದಿಂದ ತೋಳನಕೆರೆಯಿಂದ ಯುವ ರನ್ ಮ್ಯಾರಥಾನ್ ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾ ವತಿಯಿಂದ ಪೂರ್ವ ಭಾವಿ ಸಭೆ ನಡೆಯಿತು.

ರಾಜ್ಯ ಎಸ್​ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಮಾತನಾಡಿ, ದೇಶದ 75 ಕ್ಷೇತ್ರಗಳಲ್ಲಿ ಯುವಕರನ್ನು ವ್ಯಸನ ಮುಕ್ತ ಮಾಡುವ ಗುರಿ ಹೊಂದಲಾಗಿದೆ. ಮ್ಯಾರಥಾನ್​ನಲ್ಲಿ ಯುವಕ ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ನಶೆ ಮುಕ್ತ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪಣತೊಟ್ಟಿದ್ದಾರೆ. ಈ ಮಹತ್ವದ ಸಂಕಲ್ಪಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಮಹಾನಗರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೀತಂ ಅರಕೇರಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ನಾಡಜೋಶಿ, ಬಸವರಾಜ ಗರಗ, ರಾಜು ಕಾಳೆ, ಮಂಜುನಾಥ ಕಾಟಕರ, ಮಣಿಕಂಠ ಶಾಗೋಟಿ, ಮಂಜುನಾಥ ಮಲ್ಲಿಗವಾಡ, ಹಣಮಂತ ಹರಿವಾಣ, ಅಶೋಕ ವಾಲ್ಮೀಕಿ, ಸೀಮಾ ಲದವಾ, ಸರೋಜಾ ಛಬ್ಬಿ, ಶಕ್ತಿ ಹಿರೇಮಠ, ಬಸವರಾಜ ಜಾಬೀನ, ಮಂಜುನಾಥ ಹೆಬಸೂರ, ಹರೀಶ ಹಳ್ಳಿಕೇರಿ ಹಾಗೂ ಇತರರು ಇದ್ದರು.