ಜಿಲ್ಲೆ

ಪ್ರಾಚೀನ ದೇವಸ್ಥಾನಗಳ ಸಂರಕ್ಷಣೆ ಅಗತ್ಯ

Yadgir

ಯಾದಗಿರಿ: ಪ್ರಾಚೀನ ಕಾಲದ ದೇವಸ್ಥಾನಗಳು, ಕಲ್ಯಾಣಿಗಳನ್ನು ರಕ್ಷಿಸುವ ಮೂಲಕ ಇತಿಹಾಸದ ಕಾಲಗರ್ಭದಲ್ಲಿ ಹುದುಗಿದ ಮಾಹಿತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅವಶ್ಯಕತೆ ಇದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೆಶ ಬೆಳಗೇರಾ ತಿಳಿಸಿದರು.

ಗುರುಮಠಕಲ್ ಪಟ್ಟಣದ ಐತಿಹಾಸಿಕ ಅರ್ಧ ನಾರೀಶ್ವರ ದೇವಸ್ಥಾನದ ಆವರಣದಲ್ಲಿ ಮಂಡಲ ಯುವ ಮೋರ್ಚಾದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರಾತನ ದೇಗುಲಗಳು ಗತ ಇತಿಹಾಸವನ್ನು ಸಾರಿ ಹೇಳುವ ಹೆಗ್ಗುರುತುಗಳಾಗಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.

ಇನ್ನು ಮುಂದೆ ಪಕ್ಷದ ಯುವ ಪ್ರತಿ ತಿಂಗಳ ಕಡೆಯ ಭಾನುವಾರದಂದು ಪ್ರಾಚೀನ ಕಾಲದ ದೇವಸ್ಥಾನ, ಕಟ್ಟಡಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಮುಖಮಡರಾದ ರಾಜೇಂದ್ರ ಕಲಾಲ, ರವಿ ಪೋತಲ್, ಉದಯಸಿಂಗ್, ಮಂಡಳ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರಣು ಯಲ್ಹೇರಿ, ಲಕ್ಷ್ಮಣ ಆಶನಾಳ, ಬಸ್ಸು ಬಳಿಚಕ್ರ, ಸಾಬು ಹತ್ತಿಕುಣಿ, ಶರಣು ರಾಂಪುರ, ಶರಣು ಹೊನಗೇರಾ, ಹಣಮಂತ ತಾತಳಗೇರಾ, ಮರಿಲಿಂಗ ಹೊನಗೇರಾ, ಹರೀಶ ಬಳಿಚಕ್ರ, ಗವಿ ತಾತಳಗೇರಾ, ರವಿ ಪೂಜಾರಿ ಇದ್ದರು.