ಜಮಖಂಡಿ:ರಾಜ್ಯ ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ನಗರದ ಹೊರ ವಲಯದ ವಿಜಯಪುರ ಧಾರವಾಡ ರಾಜ್ಯ ಹೆದ್ದಾರಿ ತಡೆದು ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಮುಧೋಳ ರಸ್ತೆಯ ಮೌಲಾನಾ ಅಬುಲಕಲಾಂ ಆಜಾದ ಸರ್ಕಲ್ನಲ್ಲಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ರಾಜ್ಯದಾದ್ಯಂತ ರಸ್ತೆಗಳು ಹದಗೆಟ್ಟಿವೆ. ತಾಲೂಕಿನ 1200 ಕಿ.ಮೀ. ರಸ್ತೆಯ ಪೈಕಿ 850 ಕಿ.ಮೀ. ರಸ್ತೆ ಹಾಳಾಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಔಷಧೀಯ ಕೊರತೆ ಇದೆ. ಹಲವು ಬಾರಿ ಸರ್ಕಾರಕ್ಕೆ, ಹಾಗೂ ಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಉಚಿತ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಮುಗ್ಗರಿಸಿದೆ ಎಂದರು.
ರಾಜ್ಯಸರ್ಕಾರ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ಮರೆತಂತಿದೆ, ರಸ್ತೆಗಳು ಹಾಳಾಗಿರುವುದರಿಂದ ರಾಜ್ಯದ ಮರ್ಯಾದೆ ಹರಾಜಾಗುತ್ತಿದೆ. ಪರರಾಜ್ಯ ಹಾಗೂ ದೇಶಗಳ ಜನರು ರಸ್ತೆಯ ದುರಸ್ತಿಯನ್ನು ಟೀಕಿಸುತ್ತಿದ್ದಾರೆ. ಕೆಲ ಕಂಪನಿಗಳು ರಾಜ್ಯದಿಂದ ಪಲಾಯನಕ್ಕೆ ಮುಂದಾಗಿವೆ. ಬೆಂಗಳೂರಿನಲ್ಲಿಯು ಪರಿಸ್ಥಿತಿ ಹೊರತಾಗಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಹರಿಸುವ ಮೂಲಕ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ನೀತಿಯಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳೇ ಕಾಣುತ್ತಿವೆ. ಸರ್ಕಾರ ಎಚ್ಚೆತ್ತು ಕೊಂಡು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡದಿದ್ದರೇ ರಾಜ್ಯದ ಜನರು ಅದೇ ಗುಂಡಿಗಳಲ್ಲಿ ಕಾಂಗ್ರೆಸ್ಸು ಮುಚ್ಚುತ್ತಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡರು ಜಮಖಂಡಿ ೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ತಮ್ಮದೇ ಸರ್ಕಾರ ಇರುವುದರಿಂದ ಅಭಿವೃದ್ಧಿಗೆ ಸಹಕಾರ ನೀಡಬೇಕು, ೇತ್ರದ ವಿಷಯ ಬಂದಾಗ ಎಲ್ಲ ಪದವರು ಒಂದಾಗಿ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯೆ ವಿಜಯಲಕ್ಷಿ$್ಮ ತುಂಗಳ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಈಶ್ವರ ಆದೆಪ್ಪನವರ, ಸುರೇಶಗೌಡ, ಪಾಟೀಲ, ಎಂ.ಬಿ. ಪಾಟೀಲ, ಗಣೇಶ ಸಿರಗಣ್ಣವರ, ಶಂಕರ ಕಾಳೆ, ಧರೆಪ್ಪ ಗುಗ್ಗರಿ, ಶಾಲಿನಿ ಹಿರೇಮಠ, ಗೀತಾ ಸೂರ್ಯವಂಶಿ, ಗೀತಾ ಆಸಂಗಿ, ಯಮನೂರು ಮೂಲಂಗಿ ಇತರರು ಇದ್ದರು.
ಜಮಖಂಡಿ ನಗರದ ಮುಧೋಳ ರಸ್ತೆಯ ಮೌಲಾನಾ ಅಬುಲಕಲಾಂ ಆಜಾದ ಸರ್ಕಲ್ನಲ್ಲಿ ರಾಜ್ಯ ಹೆದ್ದಾರಿ ತಡೆದು ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ನೇತೃತ್ವದಲ್ಲಿ ಬಿಜೆಪಿ ಕಾಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯೆ ವಿಜಯಲಕ್ಷಿ$್ಮ ತುಂಗಳ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಈಶ್ವರ ಆದೆಪ್ಪನವರ, ಸುರೇಶಗೌಡ, ಪಾಟೀಲ, ಎಂ.ಬಿ. ಪಾಟೀಲ ಇದ್ದರು.