ಜಿಲ್ಲೆ

ಬಿಜೆಪಿ ಕಾರ್ಯಕರ್ತೆಯರಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಹಾಗೂ ಪತ್ರಕರ್ತೆಯೊಂದಿಗೆ ಉಡಾಫೆಯಿಂದ ಮಾತನಾಡಿರುವ ಮಾಜಿ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಮಹಿಳಾ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ದುರ್ಗದಬೈಲ್ ವೃತ್ತದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಹಾಗೂ ಆರ್.ವಿ. ದೇಶಪಾಂಡೆ ಅವರ ಭಾವಚಿತ್ರಗಳನ್ನು ದಹಿಸಿದ ಬಿಜೆಪಿ ಕಾರ್ಯಕರ್ತೆಯರು, ಮಹಿಳೆಯರ ಬಗ್ಗೆ ಗೌರವ ತಾಳುವಂತೆ ಹಾಗೂ ದೇಶದ ಸಂಸ್ಕೃತಿ ಕಲಿಯುವಂತೆ ಒತ್ತಾಯಿಸಿದರು.

ಹು-ಧಾ ಪೂರ್ವ ಅಧ್ಯಕ್ಷ ಮಂಜುನಾಥ ಕಾಟಕರ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸತೀಶ ಶೇಜವಾಡಕರ, ಹು-ಧಾ ಪೂರ್ವ ಮಹಿಳಾ ಮೋರ್ಚಾ ಘಟಕದ ಸವಿತಾ ಚವ್ಹಾಣ, ಸರೋಜ ಛಬ್ಬಿ, ಸೀಮಾ ಲದ್ವಾ, ಪೂರ್ಣಿಮಾ ಶಿಂಧೆ, ಪದ್ಮ ಚಿಗಳಂಪಲ್ಲಿ, ಭಾರತಿ ವೈ., ಮಂಜುಳಾ ಪರಭತ, ಅನುರಾಧ ಚಿಲ್ಲಾಳ, ಸುನಿತಾ ಜರ್ತಾರಘರ, ರಂಗಾ ಕಠಾರೆ, ಲಕ್ಷೀ ಕಾಂತ ಘೋಡಕೆ, ರಾಜು ಕೊರ್ಯುಣಮಠ, ಡಾ. ರವೀಂದ್ರ ವೈ., ಅಮೃತ ಕಲ್ಪವೃಕ್ಷ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.