ಜಿಲ್ಲೆ

ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲುವು

ವೀರೇಶ ಸೌದ್ರಿ

ಹಳಿಯಾಳ: ಸ್ಥಳೀಯ ಸೇವಾ ಸಹಕಾರಿ ಸಂಘಗಳಿಗೆ ಡಿ. 28ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಹಳಿಯಾಳ ರೈತರ ಸೇವಾ ಸಹಕಾರಿ ಸಂಘದ ಸಾಲಗಾರ ಸಾಮಾನ್ಯ ವರ್ಗಕ್ಕೆ ಅಭ್ಯರ್ಥಿಯಾಗಿ ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ನಾಮಪತ್ರ ಸಲ್ಲಿಸಿದರು.

ಪಟ್ಟಣದ ಮಹಾಗಣಪತಿ ಹಾಗೂ ನಾಗನಾಥ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಘೋಟ್ನೇಕರ ಹಾಗೂ ಇನ್ನುಳಿದ 10 ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ಪಿಐ ಮಾನೆ ಅವರಿಗೆ ಸಲ್ಲಿಸಿದರು.

ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಹಳಿಯಾಳ ಕ್ಷೇತ್ರದ ಎಲ್ಲ ಸಹಕಾರಿ ಸಂಘಗಳಲ್ಲಿ ಈ ಬಾರಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ. ಘೋಟ್ನೇಕರ ಅವರೊಂದಿಗೆ ಬಿಜೆಪಿ ಬಾವುಟವನ್ನು ಕ್ಷೇತ್ರದಲ್ಲಿ ಹಾರಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದರು.

ಎಸ್.ಎಲ್. ಘೋಟ್ನೇಕರ ಮಾತನಾಡಿ, ತಾಲೂಕಿನ ಎಲ್ಲ ಸೊಸೈಟಿಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹಳಿಯಾಳದ ಸಾಮಾನ್ಯ ವರ್ಗಕ್ಕೆ ಮಲ್ಲೇಶಿ ಉಪ್ಪಿನ, ಪರಶುರಾಮ ಪವಾರ, ಲತೀಪಶಾ ಲತೀಫನವರ, ಎಸ್.ಟಿ ವರ್ಗಕ್ಕೆ ಬಸವರಾಜ ಮಡ್ಡಿ, ಹಿಂದುಳಿದ ಅ ವರ್ಗಕ್ಕೆ ಚಂದ್ರಕಾಂತ ಹಣಬರ, ಎಸ್‌ಸಿ ವರ್ಗಕ್ಕೆ ಯಲ್ಲಪ್ಪ ಕಲಭಾವಿ, ಹವಗಿ ಸಾಮಾನ್ಯ ವರ್ಗಕ್ಕೆ ಮನೋಹರ ಅಂಗ್ರೋಳ್ಳಿ, ತುಳಸಾ ಟೋಸುರ, ಕರ್ಲಕಟ್ಟಾ ಬ ವರ್ಗಕ್ಕೆ ಗುರುನಾಥ ಗೌಡಾ ಪಾಟೀಲ, ಸಾಮಾನ್ಯ ವರ್ಗಕ್ಕೆ ರುಕ್ಮಾ ಭಾಗ್ವತಕರ ನಾಮಪತ್ರ ಸಲ್ಲಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಪ್ರಮುಖರಾದ ಮಂಗೇಶ ದೇಶಪಾಂಡೆ, ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ಶ್ರೀನಿವಾಸ ಘೋಟ್ನೇಕರ, ಚೂಡಪ್ಪ ಬೋಬಾಟಿ, ಅಪ್ಪಾರಾವ ಪೂಜಾರಿ, ಯಲ್ಲಪ್ಪ ಮಾಲ್ವನಕರ ಇತರರಿದ್ದರು.