ಜಿಲ್ಲೆ

ಬಿಜೆಪಿ ಮುಂಡರಗಿ ಮಂಡಲದಿಂದ ಪ್ರತಿಭಟನೆ ನಾಳೆ

Gadag - Desk - Tippanna Avadoot

ಮುಂಡರಗಿ: ಪಟ್ಟಣದಲ್ಲಿ ಬಿಜೆಪಿ ಮುಂಡರಗಿ ಮಂಡಲದಿಂದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಏ. 8ರಂದು ಬೆಳಗ್ಗೆ 11ಗಂಟೆಗೆ ಭ್ರಷ್ಟ ಮತ್ತು ಜನವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ, ಬೆಲೆ ಏರಿಕೆ, ದಲಿತರ ಹಣ ದುರುಪಯೋಗ, ಮುಸ್ಲಿಂ ಓಲೈಕೆ ನೀತಿಗಳ ವಿರುದ್ಧ ಮತ್ತು ಸದನದಿಂದ ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆಯುವ ಕುರಿತಂತೆ ಬಸ್ ನಿಲ್ದಾಣದ ಎದುರಿನಿಂದ ತಹಸೀಲ್ದಾರ್ ಕಚೇರಿವರೆಗೂ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.