ಬಿಜೆಪಿ 
ಜಿಲ್ಲೆ

ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಿಗೆ ಜಯ

ಅಭಿನಯ್ ಎಚ್.ಎಂ

ಸಕಲೇಶಪುರ: ತಾಲೂಕಿನ ಎರಡು ಗ್ರಾಮ ಪಂಚಾಯಿತಿಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.

ಯಸಳೂರು ಹೋಬಳಿಯ ಚಂಗಡಿಹಳ್ಳಿ ಮತ್ತು ಕುರುಭತ್ತೂರು ಗ್ರಾಮ ಪಂಚಾಯಿತಿಗಳ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು.

ಚಂಗಡಿಹಳ್ಳಿ ಗ್ರಾಪಂನ ಹೇರೂರು ಸಾಮಾನ್ಯ ಕ್ಷೇತ್ರದಿಂದ ನಾಗನಹಳ್ಳಿಯ ಎನ್.ಎಂ.ಮಧು ಮತ್ತು ಕುರುಭತ್ತೂರು ಗ್ರಾಮ ಪಂಚಾಯಿತಿಯ ಆದರಗೆರೆ ಕ್ಷೇತ್ರದ ಸಾಮಾನ್ಯ ವರ್ಗದಿಂದ ಎ.ಡಿ.ಸತ್ಯಜಿತ್ ಜಯ ಗಳಿಸಿದ್ದಾರೆ.

ಚಂಗಡಿಹಳ್ಳಿ ಗ್ರಾಮ ಪಂಚಾಯಿತಿಯ ಹೇರೂರು ಕ್ಷೇತ್ರದ ಒಂದು ಸದಸ್ಯ ಸ್ಥಾನಕ್ಕೆ 3 ಜನರು ಸ್ಪರ್ಧೆೆ ಮಾಡಿದ್ದರು. ಹೇರೂರು ಮಧು-248, ವಿಶ್ವನಾಥ್-173, ಅಶೋಕ-49 ಮತ ಪಡೆದಿದ್ದಾರೆ. ಕುರುಭತ್ತೂರು ಗ್ರಾಮ ಪಂಚಾಯಿತಿಯಲ್ಲಿ 1 ಸಾಮಾನ್ಯ ವರ್ಗದ ಸದಸ್ಯ ಸ್ಥಾನಕ್ಕೆ 4 ಜನರು ಸ್ಪರ್ಧೆೆ ಮಾಡಿದ್ದು, ಸತ್ಯಜಿತ್-288,ವಸಂತ್-130,ಅಪ್ಪಸ್ವಾಮಿ-102,ನಾಗೇಶ್-48 ಮತ ಪಡೆದಿದ್ದಾರೆ.

ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಶಾಸಕ ಸಿಮೆಂಟ್ ಮಂಜು, ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಸೇರಿದಂತೆ ಇತರರು ಅಭಿನಂದಿಸಿದರು.