ತೇರದಾಳ ಸಮೀಪದ ಸಸಾಲಟ್ಟಿ ಗ್ರಾಮ ಪಂಚಾಯಿತಿ ವಾರ್ಡ್ ಸಂಖ್ಯೆ 5ಕ್ಕೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾಂತೇಶ ಹುಂಡೇಕಾರ ಅವರನ್ನು ಬನಹಟ್ಟಿಯ ಕಚೇರಿಯಲ್ಲಿ ಶಾಸಕ ಸಿದ್ದು ಸವದಿ ಸನ್ಮಾನಿಸಿದರು. 
ಜಿಲ್ಲೆ

ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು

Vijayapura - Desk - Gurappa Lokuri

ತೇರದಾಳ:ಸಮೀಪದ ಸಸಾಲಟ್ಟಿ ಗ್ರಾಮ ಪಂಚಾಯಿತಿ ವಾರ್ಡ್ ಸಂಖ್ಯೆ 5ಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾಂತೇಶ ಹುಂಡೇಕಾರ ಗೆಲುವು ಸಾಧಿಸಿದ್ದಾರೆ. 655 ಮತದಾರರಿದ್ದ ವಾರ್ಡ್‌ನಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ 565 ಮತಗಳು ಚಲಾವಣೆಯಾಗಿದ್ದವು.

ಉಪಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬುಧವಾರ ನಡೆದ ಮತ ಎಣಿಕೆಯಲ್ಲಿ ಮಹಾಂತೇಶ ಹುಂಡೇಕಾರ 278ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಪ್ರತಿಸ್ಪರ್ಧಿ ರಮೇಶ ಸರಿಕರ 238, ಸಾಗರ ಕಾಂಬಳೆ 43 ಮತಗಳನ್ನು ಪಡೆದುಕೊಂಡರು.

ಒಟ್ಟು ಮತಗಳಲ್ಲಿ 6 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಶ್ರೀಧರ ನಂದಿಹಾಳ ತಿಳಿಸಿದ್ದಾರೆ.
ತೇರದಾಳ ಠಾಣಾಧಿಕಾರಿ ಅಪ್ಪು ಐಗಳಿ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ತಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಬೆಂಬಲಿಗರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಕ್ಷೇತ್ರದ ಶಾಸಕ ಸಿದ್ದು ಸವದಿ ಸೇರಿ ಬಿಜೆಪಿ ಮುಖಂಡರು ಮಹಾಂತೇಶ ಹುಂಡೇಕಾರ ಅವರಿಗೆ ಅಭಿನಂದಿಸಿದರು.