ಜಿಲ್ಲೆ

ಸ್ಟಾಲಿನ್ ಹೇಳಿಕೆಗೆ ದ.ಕ.ಜಿಲ್ಲಾ ಬಿಜೆಪಿ ಖಂಡನೆ

Mangaluru - Hariprasad Rai



ಮಂಗಳೂರು : ಸನಾತನ ಧರ್ಮವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯನ್ನು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ.
ಜಗತ್ತಿನಲ್ಲಿ ಭಾರತ ಗುರುತಿಸಿಕೊಳ್ಳುವುದು ಸನಾತನ ಧರ್ಮ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ. ಸಾವಿರಾರು ವರ್ಷಗಳ ಕಾಲ ಈ ದೇಶದ ಧರ್ಮ, ಸಂಸ್ಕೃತಿಯ ಮೇಲೆ ನಿರಂತರ ದಾಳಿಯಾದರೂ ಧರ್ಮ ನಾಶ ಹೊಂದಿಲ್ಲ. ಜಗತ್ತು ಭಾರತದ ಧರ್ಮ ಸ್ವೀಕಾರ ಮಾಡುತ್ತಿರುವ ಕಾಲಘಟ್ಟದಲ್ಲಿ ಉದಯನಿಧಿ ಹೇಳಿಕೆ ಮೂರ್ಖತನದ ಪರಮಾವಧಿ. ಇಂಡಿಯಾ ಒಕ್ಕೂಟದ ಉದ್ದೇಶ ದೇಶದ ಅಭಿವೃದ್ಧಿಯಾಗಿರದೆ, ಧರ್ಮ, ನಾಶ ಮಾಡುವ ಹುನ್ನಾರ ಅಡಗಿದೆ ಎನ್ನುವುದು ಈ ಹೇಳಿಕೆಯಿಂದ ಸಾಬೀತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.