ಜಿಲ್ಲೆ

ಜ.11ರಂದು ಉಡುಪಿಗೆ ಅಣ್ಣಾಮಲೈ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಿಟಿಜನ್​ ಫಾರ್​ ಸೋಶಿಯಲ್​ ಜಸ್ಟಿಸ್​ ಮತ್ತು ದಲಿತ ಹಿಂದುಳಿದ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ಪುರಭವನದಲ್ಲಿ ಜ.11 ರಂದು ಬೆಳಗ್ಗೆ 11 ಗಂಟೆಗೆ ಸಂವಿಧಾನ ಸಮ್ಮಾನ್​ ಕಾರ್ಯಕ್ರಮ ಆಯೋಜಿಸಲಾಗಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಸಂವಿಧಾನ ಸಮ್ಮಾನ್​ ಸಮಿತಿ ವಿಭಾಗ ಸಂಚಾಲಕ ಕಿದಿಯೂರು ಉದಯ್​ ಕುಮಾರ್​ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಸಂವಿಧಾನ ತಿದ್ದುಪಡಿ ಮಾಡಲು ಕಾಂಗ್ರೆಸ್​ ಸರ್ಕಾರಕ್ಕಿದ್ದ ದುರುದ್ದೇಶ ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಬಿಜೆಪಿ ಸರ್ಕಾರ ಮಾಡಿರುವ ತಿದ್ದುಪಡಿಗಳ ಕುರಿತು ಬೆಳಕು ಚೆಲ್ಲುವ ಸಲುವಾಗಿ ದೇಶಾದ್ಯಂತ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ಕಾಂಗ್ರೆಸ್​ ಸರ್ಕಾರ 75 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದು, ಬಿಜೆಪಿ 22 ಹಾಗು ಇತರ ಸರ್ಕಾರ 31 ಬಾರಿ ತಿದ್ದುಪಡಿಗಳನ್ನು ಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಘಟನಾ ಸಮಿತಿ ಕಾರ್ಯದರ್ಶಿ ರೇಷ್ಮಾ ಉದಯ್​ ಕುಮಾರ್​ ಶೆಟ್ಟಿ, ಶ್ರೀಕಾಂತ್​ ನಾಯಕ್​, ರತ್ನಾಕರ್​ ಇಂದ್ರಾಳಿ, ಚಂದ್ರ ಪಂಚವಟಿ ಉಪಸ್ಥಿತರಿದ್ದರು.