ಜಿಲ್ಲೆ

ಬಿಜೆಪಿಗೆ ರಾಜೀನಾಮೆ ಕೊಟ್ಟವರು ನೈಜ ಹಿಂದುತ್ವವಾದಿಗಳು: ಪ್ರಮೋದ್ ಮುತಾಲಿಕ್

ಗೋಪಾಲಕೃಷ್ಣ ಪಾದೂರ್

ಉಡುಪಿ: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಗಂಭೀರವಾಗಿ ಪರಿಗಣಿಸಿದ ಕಾರ್ಯಕರ್ತರು ಪಕ್ಷದ ಹುದ್ದೆಗೆ ರಾಜೀನಾಮೆ ಕೊಡುತ್ತಿದ್ದಾರೆ. ಅವರೆಲ್ಲ ನೈಜ ಹಿಂದುವಾದಿಗಳು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು

ಶುಕ್ರವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರು ಕಾರ್ಯಕರ್ತರ ಕಷ್ಟ ಹಾಗು ಸುಖಕ್ಕೆ ನಾಯಕರೆನಿಸಿಕೊಂಡವರು ಸ್ಪಂದಿಸಿದ್ದರೇ ಪ್ರವೀಣ್ ಹತ್ಯೆ ಆಗುತ್ತಿರಲಿಲ್ಲ. ಬಿಜೆಪಿಗೆ ನಿಷ್ಠೆಯಿಂದ ದುಡಿಯುತ್ತಿದ್ದ ಕಾರ್ಯಕರ್ತ ಪ್ರವೀಣ್ ಸ್ವಂತಕ್ಕಾಗಿ ಏನನ್ನು ಮಾಡಿಕೊಂಡಿಲ್ಲ. ಒಂದು ಸ್ವಂತ ಮನೆಯೂ  ಇಲ್ಲ. ಆದರೆ ಬಿಜೆಪಿಯ ನಾಯಕರು 3-4 ಪೀಳಿಗೆ ಆಗುವಷ್ಟು ಹಣ ಕೂಡಿಟ್ಟಿದ್ದಾರೆ.  ಈ ಆಕ್ರೋಶವೇ ಶವಯಾತ್ರೆಯ ದಿನ ಸ್ಫೋಟವಾಗಿದೆ ಎಂದರು.


ಸುರತ್ಕಲ್ ನಲ್ಲಿ ನಡೆದಿರುವ ಘಟನೆ ಯಾವ ವಿಚಾರಕ್ಕೆ ಎಂದು ತಿಳಿದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆಯಾಗಬಾರದು. ಹಿಂದು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟಿಗೆ ಸೇರಿ ಈ ವಿಚಾರವನ್ನು ಬಗೆಹರಿಸಬೇಕು ಎಂದರು.


ಮಂಗಳೂರು ಪ್ರವೇಶಕ್ಕೆ ತಡೆ
ಪ್ರಮೋದ್ ಮುತಾಲಿಕ್ ಅವರು ಉಡುಪಿಯಿಂದ ಮಂಗಳೂರಿಗೆ ತೆರಳಿದ್ದು, ಹೆಜಮಾಡಿ ಗಡಿಯಲ್ಲಿ ಪೊಲೀಸರು ತಡೆಹಿಡಿದು ವಾಪಸ್ ಉಡುಪಿಗೆ ಕಳುಹಿಸಿದ್ದಾರೆ.