ಜಿಲ್ಲೆ

ಕರ್ನಾಟಕದ‌ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕು-ಗೋವಾ ಸಿಎಂ ಪ್ರಮೋದ ಸಾವಂತ

Uttara Kannada - Subash Hegde

ಕಾರವಾರ: ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ, ಅದು ಜನರಿಗಾಗಿ ಕೆಲಸ ಮಾಡುತ್ತಿಲ್ಲ. ವೈಯಕ್ತಿಕ ಉದ್ದೇಶಕ್ಕಾಗಿ ಕೆಲಸ ಮಾಡುತ್ತದೆ. ಈ ಸರ್ಕಾರವನ್ನು ಇಳಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು.
ನಗರದಲ್ಲಿ ಬಿಜೆಪಿ ಉಮೇದುವಾರ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆಗೂ ಪೂರ್ವ ಅಂಬೇಡ್ಕರ್ ಸರ್ಕಲ್ ನಲ್ಲಿ ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಮೋದಿ ಅವರ ವಿಕಸಿತ ಭಾರತ ಸಾಕಾರ ಮಾಡಲು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿದೆ. ಮೋದಿ ಸರ್ಕಾರ ನಾಲ್ಕು ಅಂಶಗಳ ಕಾರ್ಯಕ್ರಮ ಮಾಡಿದೆ. ನಾರಿ ಶಕ್ತಿ ಅಭಿವೃದ್ಧಿ ಮಾಡಿದೆ. ಯುವ ಶಕ್ತಿ ಬೆಳವಣಿಗೆಗೆ ಬೇಕಾದ ಕಾರ್ಯ ಮಾಡಿದೆ. ಮೂರನೇಯದು ಕಿಸಾನ್ ಶಕ್ತಿ ಅಭಿವೃದ್ಧಿಗೆ ಹಲವು ಕಾರ್ಯ ಮಾಡಿದೆ. ಗರೀಬ ಕಲ್ಯಾಣಕ್ಕಾಗಿ ಕಾರ್ಯ ಮಾಡಿದೆ ಎಂದರು.
ಕಾಂಗ್ರೆಸ್ ಕೈ ತೋರಿಸುವ ಕೆಲಸ ಮಾಡಿತ್ತು.ಮೋದಿ ಸರ್ಕಾರ ಕೆಲಸ ಮಾಡಿ ತೋರಿಸಿದೆ. ದೇಶದಲ್ಲಿ ಒಂದೇ ಚಿನ್ಹೆ ನಡೆಯುತ್ತಿದೆ ಅದು ಕಮಲದ ಚಿನ್ಹೆ ಎಂದರು.
ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಕಾಂಗ್ರೆಸ್ ಸರ್ಕಾರ ಅಧಿಕಾರದ ದುರ್ಬಳಕೆ ಮಾಡುತ್ತಿದೆ. ದೇಶ ರಕ್ಷಣೆಗಾಗಿ ಮೋದಿಯವರಿಗೆ ಉತ್ತರ ಕನ್ನಡವನ್ನು ಕೊಡುಗೆಯಾಗಿ ನೀಡಬೇಕಿದೆ ಎಂದರು.
ರಾಜ್ಯ ಕಾರ್ಯದರ್ಶಿ ಸುನೀಲ ಕುಮಾರ್, ವಿಕಸಿತ ಭಾರತ ಮಾಡಲು ಎಲ್ಲರೂ ಸೇರಿ ಮೋದಿ ಸರ್ಕಾರ ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದರು.
ಖಾನಾಪುರ ಶಾಸಕ ವಿಠ್ಠಲ ಹಳಗೇಕರ್, ನಾವು ಖಾನಾಪುರದಲ್ಲಿ ನಾವು ತಿರಸ್ಕರಿಸಿದವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ ಬಹು ಸಂಖ್ಯಾತ ಹಿಂದುಗಳ ಭಾವನೆ ವ್ಯಕ್ತಪಡಿಸಲು ತೊಂದರೆ ಕೊಡುತ್ತದೆ. ನರೇಂದ್ರ ಮೋದಿ ಅವರು ಹಾಕಿಕೊಂಡ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಜಾರಿ ಮಾಡಲು ನಾನು ಇರುತ್ತೇನೆ ಎಂದರು.
ಶಾಸಕರಾದ ದಿನಕರ ಶೆಟ್ಟಿ, ಅರವಿಂದ ಬೆಲ್ಲದ, ಎಂಎಲ್ ಸಿಗಳಾದ ಗಣಪತಿ ಉಳ್ವೇಕರ್, ಶಾಂತಾರಾಮ ಸಿದ್ದಿ, ಎಸ್.ವಿ.ಸಂಕನೂರು, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಸುನೀಲ ಹೆಗಡೆ, ಶಿವಾನಂದ ನಾಯ್ಕ, ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಇದ್ದರು.

ಇದನ್ನೂ ಓದಿ: