ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ಬಿಜೆಪಿ ವಿವಿಧ ಮೋರ್ಚಾ ಕಾರ್ಯಕರ್ತರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ ಇತರರಿದ್ದರು.  
ಜಿಲ್ಲೆ

ಅಭಿವೃದ್ಧಿ ಮರೆತ ರಾಜ್ಯ ಸರ್ಕಾರ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಸಂವಿಧಾನ ಬದಲಾವಣೆ ಕುರಿತ ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ಬಿಜೆಪಿ ವಿವಿಧ ಮೋರ್ಚಾ ಕಾರ್ಯಕರ್ತರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಡಿಸಿಎಂ ಮತ್ತು ರಾಜ್ಯ ಸರ್ಕಾರದ ವೈಲ್ಯದ ್ಲೆಕ್ಸ್‌ಗಳೊಂದಿಗೆ ಪ್ರತಿಭಟನೆ ನಡೆಸಿದ್ದು, ಡಿಸಿಎಂ ಭಾವಚಿತ್ರ ಸುಡಲೆತ್ನಿಸಿದ್ದಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಗದ್ದಲ ಉಂಟಾಯಿತು. ಭಾವಚಿತ್ರಕ್ಕೆ ಬೆಂಕಿ ಹಚ್ಚುವಾಗ ನಗರ ಪಿಐ ಪ್ರಕಾಶ ಮಾಳೆ ಅಡ್ಡಿಪಡಿಸಿದರಲ್ಲದೇ, ಭಾವಚಿತ್ರವನ್ನು ಕಿತ್ತುಕೊಂಡರು. ನಂತರ ಬೇಡಿಕೆ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು.

ಎಂಎಲ್ಸಿ ಹೇಮಲತಾ ನಾಯಕ ಮಾತನಾಡಿ, ಮುಸ್ಲಿಂ ಓಲೈಕೆ ಹೆಚ್ಚುತ್ತಿದ್ದು, ಸಂವಿಧಾನ ಬದಲಾವಣೆ ಹೇಳಿಕೆ ನೀಡಿರುವುದು ಖಂಡನೀಯ. ಅಭಿವೃದ್ಧಿ ಮರೆತ ರಾಜ್ಯ ಸರ್ಕಾರ ಒಂದು ವರ್ಗದ ಒಲೈಕೆಯಲ್ಲಿ ಕಾಲ ಕಳೆಯುತ್ತಿದೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮುಸ್ಲಿಂ ಮತಕ್ಕಾಗಿ ರಾಜ್ಯ ಸರ್ಕಾರ ವಿವಿಧ ಕಸರತ್ತು ನಡೆಸುತ್ತಿದ್ದು, ಹಿಂದುಗಳನ್ನು ವಿರೋಧಿಸುತ್ತಿದೆ. 2 ವರ್ಷದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಮುಸ್ಲಿಂ ತುಷ್ಟೀಕರಣಕ್ಕೆ ಆದ್ಯತೆ ನೀಡುತ್ತಿದೆ. ಎಸ್‌ಸಿ, ಎಸ್ಟಿ ಯೋಜನೆ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ಮೀಸಲು ವರ್ಗವನ್ನು ಕಡೆಗಣಿಸುತ್ತಿದೆ ಎಂದರು.

ಮಾಜಿ ಸಂಸದ ಎಸ್.ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷ ರಾದ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ನವೀನಮಾಲಿ ಪಾಟೀಲ್, ಸಿಂಗನಾಳ ಉಮೇಶ, ವಾಸುದೇವ ನವಲಿ, ಪರಶುರಾಂ ಮಡ್ಡೇರ್, ನೀಲಕಂಠಪ್ಪ ಕಟ್ಟಿಮನಿ, ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಡಬ್ಲುೃ. ವೀರಭದ್ರಪ್ಪ ನಾಯಕ, ವಾಣಿಶ್ರೀ ಮಠದ, ಶಿವು ಅರಿಕೇರಿ, ನರಸಿಂಗರಾವ್ ಕುಲ್ಕರ್ಣಿ,ಭಾರತಿ ಆಗಲೂರು, ಶಿವಪ್ಪ ಮಾದಿಗ, ಹುಲಿಗೆಮ್ಮ, ಕಾಶೀನಾಥ ಚಿತ್ರಗಾರ, ಯಮನೂರಿ ಚೌಡ್ಕಿ ಇತರರಿದ್ದರು.