ಜಿಲ್ಲೆ

ಆರೋಪಿ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿ : ನಗರದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಸಿಟ್ಟಿದ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಹುಬ್ಬಳ್ಳಿ&ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಹಳೇ ಹುಬ್ಬಳ್ಳಿಯ ದುರ್ಗದಬೈಲ್​ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯಬೇಕೆಂಬ ಉದ್ದೇಶದಿಂದ ನೀಡುವ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಆರೋಪಿ ಅಮಾನವೀಯತೆ ಕೃತ್ಯ ಮೆರೆದಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮೋರ್ಚಾ ಅಧ್ಯೆ ಪ್ರತಿಭಾ ಪವಾರ ಹಾಗೂ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜುನಾಥ ಕಾಟಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಪೂಜಾ ರಾಯಕರ, ರ್ಪೂಣಿಮಾ ಶಿಂಧೆ, ಅನುರಾಧ ಚಿಲ್ಲಾಳ, ರಾಧಾಬಾಯಿ ಸಫಾರೆ, ಶೀಲಾ ಕಾಟಕರ, ಸುಮಿತ್ರಾ ಗುಂಜಾಳ, ಶಾಂತ ಹಿರೇಮಠ, ಪ್ರೀತಿ ಲದವಾ, ಪ್ರಭು ನವಲಗುಂದಮಠ, ಸಂತೋಷ ಅರಕೇರಿ, ರಾಜು ಜರತಾರರ, ರಂಗಾ ಬದ್ದಿ, ರಾಜು ಕೊರ್ಯಾಣಮಠ, ಗೋಪಾಲ ಕಲ್ಲೂರ, ಲಕ್ಷ್ಮೀಕಾಂತ ಘೋಡಕೆ, ಮಹೇಶ ಭಜಂತ್ರಿ, ಸುನಿತಾ ರ್ಜತಾಘರ್​, ಸವಿತಾ ಚವ್ಹಾಣ, ವೀರೇಶ ಸಾಲಿಮಠ, ನಿಲಕಂಠ ತಡಸದಮಠ, ದಯಾನಂದ ಕೊಂಗಿ, ಸಂಜು ಬುಗಡಿ, ಜಗದೀಶ ಕಂಬಳಿ, ಗಂಗಾಧರ ಟಿಕಾರೆ, ಪ್ರಕಾಶ ಬಸವ, ವಸಂತ ಬುರಡ, ಲತಾ ಅಂಗಡಿ, ಪ್ರಕಾಶ ಸಣ್ಣಕಿ, ಬಷೀರ್​ ಗಿರಣಿ ಹಾಗೂ ಇತರರು ಪಾಲ್ಗೊಂಡಿದ್ದರು.