ರಾಯಚೂರು ರಾಜ್ಯಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸದೇ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಬುಧವಾರ ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಹತ್ತಿರದ ರಸ್ತೆ ಗುಂಡಿಗಳ ಮುಂದೆ ನಿಂತು ಪ್ರತಿಭಟನೆ ಮಾಡಿದರು.
ಪ್ರತಿಭಟನೆ ವೇಳೆ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿಯೇ ಸಾಕಷ್ಟು ರಸ್ತೆಗಳು ಹದಗೆಟ್ಟು ಹೋಗಿವೆ. ರಾಯಚೂರಿನಿಂದ ಲಿಂಗಸುಗೂರು ತೆರಳಲು ಒಂದೂವರೆ ಗಂಟೆ ಬೇಕಾಗುತ್ತಿತ್ತು ಆದರೆ ಇದೀಗ ಆ ರಸ್ತೆ ಶಿಥಿಲಗೊಂಡಿದ್ದು, ಇದೀಗ ಮೂರು ತಾಸು ಬೇಕಾಗುತ್ತದೆ. ಮಾನ್ವಿಯ ರಸ್ತೆಯ ಹೈವೇ ಕಾಮಗಾರಿ ನಡೆಯುತ್ತಿದ್ದು, ಆದರೆ ಅದೂ ಕೂಡ ಬ್ರಿಡ್ಜ್ ಕಾಮಗಾರಿ ಹೆಸರಿನಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿರುವುದರಿಂದ ತೊಂದರೆ ಉಂಟಾಗುತ್ತಿದೆ ಎಂದರು.
ರಾಯಚೂರು ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಗಳೆಲ್ಲ ಕೆಟ್ಟು ಹೋಗಿದ್ದು, ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಹಣಕ್ಕೇನು ಕೊರತೆಯಿಲ್ಲ ಎಂದು ಹೇಳುತ್ತಿದ್ದು, ಆದರೆ ರಾಜ್ಯದಲ್ಲಿ ಗುಂಡಿಗಳನ್ನು ಏಕೆ ಕಾಂಗ್ರೆಸ್ ಸೃಷ್ಠಿ ಮಾಡಿತು ಎಂದು ತಿಳಿಯುತ್ತಿಲ್ಲ. ರಸ್ತೆಗಳು ಸರಿಪಡಿಸದಿದ್ದರೆ ಹಣ ಎಲ್ಲಿ ಹೋಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಮಾನಂದ ಯಾದವ್, ವಿಜಯಕುಮಾರ್ ಸಜ್ಜನ್, ಕಡಗೋಲ್ ಆಂಜನೇಯ, ರಾಜಕುಮಾರ, ಯು.ನರಸಾರೆಡ್ಡಿ, ಪಿ.ಯಲ್ಲಪ್ಪ, ವಿನಾಯಕ ರಾವ್, ಕಾರ್ತಿಕ ರೆಡ್ಡಿ, ರವಿ ಗೌಡ, ಶಶಿರಾಜ್ ಮಸ್ಕಿ, ನರಸರೆಡ್ಡಿ, ನಾಗರಾಜ್, ಈ.ಶಶಿರಾಜ್, ತಿಮ್ಮಪ್ಪ ಪಿರಂಗಿ, ನರಸಪ್ಪ ಯಾಕ್ಲಾಸುಪುರು, ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ಊಟ್ಟೂರು. ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕಡಗೋಲ್,, ತಿರುಮಲ ರೆಡ್ಡಿ, ಬಂಗಿ ನರಸಾರೆಡ್ಡಿ, ನಾಗವೇಣಿ ಸಾವಕಾರ, ಅಶ್ವಿನಿ, ಅನಿತಾ, ವಿಜಯಲಕ್ಷ್ಮಿ, ವಿ.ಪಿ.ರೆಡ್ಡಿ, ರಾಜು, ಸುರೇಶ ಸೇರಿದಂತೆ ಅನೇಕರು ಇದ್ದರು.