ಗಜೇಂದ್ರಗಡ: ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಬಿಜೆಪಿ ರೋಣ ಮಂಡಲ ವತಿಯಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ರೋಣ ಮಂಡಲ ರೈತ ಮೋರ್ಚಾ ಅಧ್ಯಕ್ಷ ಬಾಲಾಜಿರಾವ್ ಬೋಸ್ಲೆ ಮಾತನಾಡಿ, ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಿದೆ. ಅದರಲ್ಲೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಇದೇ ನೀತಿ ಮುಂದುವರಿಸಿದರೆ ಜನ ದಂಗೆ ಏಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಶಿವಾನಂದ ಮಠದ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಆಸ್ತಿ ಶುಲ್ಕ, ನೋಂದಣಿ ಶುಲ್ಕ ಹೆಚ್ಚಳ, ತರಕಾರಿ, ಬಿತ್ತನೆ ಬೀಜ ಹಾಗೂ ದಿನನಿತ್ಯದ ಸಾಮಗ್ರಿಗಳನ್ನು ಏರಿಸಿದೆ. ಈಗ ತೈಲ ಬೆಲೆ ಏರಿಕೆ ಮಾಡಿದೆ ಎಂದರು.
ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಪುರಸಭೆ ಸದಸ್ಯರಾದ ಸುಭಾಸ ಮ್ಯಾಗೇರಿ, ಕನಕಪ್ಪ ಅರಳಿಗಿಡದ, ಯಮನಪ್ಪ ತಿರಕೋಜಿ, ಉಮೇಶ ಪಾಟೀಲ, ಸೀನಪ್ಪ ಸವದಿ, ಡಿ.ಜಿ. ಕಟ್ಟಿಮನಿ, ವಿಶ್ವನಾಥ ಕುಷ್ಟಗಿ, ಶಿವಾನಂದ ಅರಳಿ, ಬಸವರಾಜ ಬಂಕದ, ವಿನಾಯಕ ಜರತಾರಿ ಇದ್ದರು.