ಮಂಡ್ಯ: ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ತಿರುಚಿ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ಸಿಗರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಕರಪತ್ರ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸುಭಾಷ್‌ನಗರ, ಆರ್.ಪಿ.ರಸ್ತೆ, ವಿ.ವಿ.ರಸ್ತೆ, ಹೊಸಹಳ್ಳಿ ಬಡಾವಣೆ, ಮಾರುಕಟ್ಟೆ, ರೈಲ್ವೆ ಅಂಡರ್ ಪಾಸ್ ಬಳಿ ವಿವಿಧ ಘೋಷಣೆಯೊಂದಿಗೆ ಮಾಹಿತಿ ಇರುವ ಕರಪತ್ರವನ್ನು ಹಿಡಿದು ಸಾರ್ವಜನಿಕರಿಗೆ ಕೊಡುವ ಮೂಲಕ ಘೋಷಣೆ ಕೂಗಿದರು.
1952ರ ಸಾರ್ವತ್ರಿಕ ಚುನಾವಣೆ ಸಮಯಕ್ಕೆ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಪಕ್ಷ ಕಟ್ಟಿ ಮುಂಬೈನಿಂದ ಕಣಕ್ಕಿಳಿದಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು. ಗೆದ್ದ ಅಭ್ಯರ್ಥಿ ಸಾವಿನಿಂದ ಬಂದಿದ್ದ ಬಂಢಾರ ಲೋಕಸಭಾ ಉಪಚುನಾವಣೆಯಲ್ಲೂ ಅಂಬೇಡ್ಕರ್ ಅವರನ್ನು ಸೋಲಿಸಲಾಯಿತು. ಈ ಮೂಲಕ ಲೋಕಸಭೆಗೆ ಬರದಂತೆ ತಡೆಯಲಾಯಿತು ಎಂದು ಆರೋಪಿಸಿದರು.
ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಗಂಗಣ್ಣ ಬೇವುಕಲ್ಲು, ಹೊಸಹಳ್ಳಿ ಶಿವು, ಶಿವಲಿಂಗಯ್ಯ, ನಂದೀಶ್, ಚಂದ್ರು, ಅಭಿ, ಯೋಗೇಶ್ ಭಾಗವಹಿಸಿದ್ದರು.