ಜಿಲ್ಲೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾಜಪಾ ಪ್ರತಿಭಟನೆ

ಪ್ರಶಾಂತ ಹೂಗಾರ

ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಪಟ್ಟಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ಮಾಡಲಾಯಿತು.

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ದುರ್ಯೋಧನ ಐಹೊಳೆ, ಡಾ. ರಾಜೇಶ ನೇರ್ಲಿ, ಮಹೇಶ ಭಾತೆ, ದುಂಡಪ್ಪ ಬೆಂಡವಾಡೆ, ಸತ್ಯೆಪ್ಪ ನಾಯಕ, ಸತೀಶ ಅಪ್ಪಾಜಿಗೋಳ ಇತರರು ಇದ್ದರು.

ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಬಸವ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ೋಷಣೆ ಕೂಗಲಾಯಿತು. ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಅೀವೇಶನದಲ್ಲಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿ ಪ್ರತಿಪಕ್ಷದ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿರುವುದು ಸಂವಿಧಾನ ವಿರೋ ನಡೆ ಎಂದರು.

ಹಿಂದೆ ಬಿಜೆಪಿ ಸರ್ಕಾರದ ಅವಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವೇಶನದಲ್ಲಿ ಸಾಕಷ್ಟು ಗಲಾಟೆ ಮಾಡಿದ್ದರು. ಆದರೂ ಅಂದಿನ ಸರ್ಕಾರ ಯಾವುದೇ ಕ್ರಮಕೈಗೊಂಡಿರಲಿಲ್ಲ, ಈಗ ಸಂವಿಧಾನ ವಿರುದ್ಧ ಕಾಯ್ದೆ ರೂಪಿಸಿದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ ಮಾತನಾಡಿ, ಹಿರೇಕೋಡಿ ಜೆನಮುನಿ ಕಾಮಕುಮಾರ ನಂದಿ ಮಹಾರಾಜರ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂದು ಬಿಜೆಪಿ ಒತ್ತಾಯ ಮಾಡಿದೆ. ಆದರೂ ಕಾಂಗ್ರೆಸ್ ಸರ್ಕಾರ ಮೊಂಡುತನ ಪ್ರದರ್ಶನ ಮಾಡುತ್ತಿದೆ. ಬೆಂಗಳೂರಿನ ಶಂಕಿತ ಉಗ್ರರ ತನಿಖೆಯನ್ನು ಎನ್‌ಐಎಗೆ ನೀಡದೆ ಇರುವುದು ಕಾಂಗ್ರೆಸ್ ಸರ್ಕಾರದ ಮೇಲೆ ಸಂಶಯ ಮೂಡಿಸುತ್ತಿದೆ ಎಂದರು.

ಹೆಸ್ಕಾಂ ಮಾಜಿ ನಿರ್ದೇಶಕ ಮಹೇಶ ಭಾತೆ, ಬಿಜೆಪಿ ರಾಜ್ಯ ರೆತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ,
ಸತ್ಯೆಪ್ಪ ನಾಯಕ, ಸತೀಶ ಅಪ್ಪಾಜಿಗೋಳ, ನ್ಯಾಯವಾದಿ
ಅಶೋಕ ಹರಗಾಪೂರೆ, ರಮೇಶ ಖೇತಗೌಡರ, ರಾಚಯ್ಯ ಹಿರೇಮಠ, ಸಂಜೀವ ಪಾಟೀಲ, ಡಾ.ರವಿ ಸಂಕ, ರಾಜು ಹರಗನ್ನವರ, ಉಮರಾಣಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಪೂಜೇರಿ, ಸುರೇಶ ಘರಬುಡೆ, ವಿಜಯ ಕೊಠಿವಾಲೆ,
 ರಾಜು ಹಿರೇಕೋಡಿ, ಮಹಾಂತೇಶ ಯಶವಂತಗೋಳ,
ಸಂಜೀವ ಪಾಟೀಲ, ಅಣ್ಣಾಸಾಹೇಬ ಖೇಮಲಾಪೂರೆ,
ಮುರಿಗೆಪ್ಪ ಅಡಿಸೇರಿ, ಧನಪಾಲ ಭೀಮನಾಯಿಕ ಇದ್ದರು.