ವಿಜಯವಾಣಿ ಸುದ್ದಿಜಾಲ ಧಾರವಾಡ
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹ ಮತ್ತು ಸಾರಿಗೆ ಸಂಸ್ಥೆಯ ಬಸ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕಗಳಿಂದ ನಗರದ ಜಿಲ್ಲಾಽಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿಯ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಆಪ್ತರ ಕೈವಾಡವಿದೆ. ಪ್ರಿಯಾಂಕ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಜತೆಗೆ ಹೊಸದಾಗಿ 4 ಗ್ಯಾರಂಟಿಗಳನ್ನು ಕೊಡಲು ಮುಂದಾಗಿದೆ. ಅಽಕಾರಿಗಳು, ಗುತ್ತಿಗೆದಾರರ ಗ್ಯಾರಂಟಿ, ಮುಂದೆ ಹಾಲಿನ ದರ ಏರಿಕೆ ಗ್ಯಾರಂಟಿ, ವಿದ್ಯುತ್ ದರ ಏರಿಕೆ ಗ್ಯಾರಂಟಿ, ಬಸ್ ದರ ಏರಿಕೆ ಗ್ಯಾರಂಟಿ ಜಾರಿಗೊಳಿಸಲಿದೆ. ಬಿಜೆಪಿ ಇದನ್ನು ಸಹಿಸುವುದಿಲ್ಲ ಎಂದರು.
ಮಾಜಿ ಶಾಸಕಿ ಸೀಮಾ ಮಸೂತಿ, ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ಮೋಹನ ರಾಮದುರ್ಗ, ಕೃಷ್ಣಾ ಗಂಡಗಾಳೇಕರ, ಪ್ರಭು ನವಲಗುಂದಮಠ, ಸುರೇಶ ಬೇದರೆ, ನೀಲವ್ವ ಅರವಾಳದ, ರೂಪಾ ಚೌಧರಿ, ಜ್ಯೊತಿ ಪಾಟೀಲ, ಸುನೀತಾ ಮಾಳಕರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.