ಇಳಕಲ್ಲದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ಮಾಡಿದರು. ಎಂ.ಆರ್.ಪಾಟೀಲ, ಅರವಿಂದ ಮಂಗಳೂರು, ಮಹಾಂತಗೌಡ ಪಾಟೀಲ ತೊಂಡಿಹಾಳ, ಮಲ್ಲಯ್ಯ ಮೂಗನೂರ ಮತ್ತಿತರರು ಇದ್ದರು. 
ಜಿಲ್ಲೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಗಿರೀಶ ಸಗರ

ಇಳಕಲ್ಲ(ಗ್ರಾ): ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ, ಮಾರುತಿ ದೇವಸ್ಥಾನ ಮಾರ್ಗವಾಗಿ ಕಂಠಿ ವೃತ್ತಕ್ಕೆ ಆಗಮಿಸಿ ಅಲ್ಲಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.

ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ. ಆರ್. ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದು ರೈತರಿಗೆ ಅನ್ಯಾಯವನ್ನು ಎಲ್ಲ ಹಂತಗಳಲ್ಲಿ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಗ್ರೇಡ್ 2 ತಹಸೀಲ್ದಾರ್ ಚಿದಾನಂದ ವಡವಡಗಿ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿದರು.

ಪ್ರತಿಭಟನೆ ಮೆರವಣಿಗೆಯಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷ ಮಹಾಂತಗೌಡ ಪಾಟೀಲ, ವೆಂಕಟೇಶ ಪೋತಾ, ಮಹೇಶ ಪಾಟೀಲ, ಮಲ್ಲಯ್ಯ ಮೂಗನೂರ, ಬಸವರಾಜ ಬಾದವಾಡಗಿ, ನಗರಸಭೆ ಸದಸ್ಯರಾದ ಚಂದ್ರಶೇಖರ ಏಕಬೋಟೆ ಸೂಗುರೇಶ ನಾಗಲೋಟಿ, ವಿಜಯ ಗಿರಡ್ಡಿ, ಆನಂದ ಚಲವಾದಿ, ವಿರೇಶ ಹಿರೇಮನಿ, ವಿಜಯ ಹೇರೂರ, ಅರವಿಂದ ಗೌಡರ, ಮಂಜುನಾಥ ಹೊಸಮನಿ, ಮಹದೇವಸಾ ಕಾಟವಾ, ಮಹಾಂತಪ್ಪ ಚೆನ್ನಿ, ತೃಪ್ತಿ ಸಾಲಿಮಠ ಮತ್ತಿತರರು ಇದ್ದರು.