ಜಮಖಂಡಿ: ವಕ್ಪ್‌ನಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ನ.5 ರಂದು ಬೆಳಗ್ಗೆ ನಗರದ ದೇಸಾಯಿ ವೃತ್ತದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಸಾಕ್ಷಾತ್ಕಾರ ನಿವಾಸದಲ್ಲಿ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಗರದ ಹಳೆ ತಹಸೀಲ್ದಾರ್ ಕಚೇರಿ ಆವರಣದಿಂದ ದೇಸಾಯಿ ವೃತ್ತವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು ಎಂದರು.
ಮುಸ್ಲಿಂ ತುಷ್ಟಿಕರಣ ಮಾಡುತ್ತ ಆಸ್ತಿ ಕಸಿದುಕೊಳ್ಳುವ ಷಢ್ಯಂತ್ರ ಮಾಡುತಿದ್ದಾರೆ, ಇದು ಖಂಡನೀಯ, ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸುತಿದ್ದಾರೆ ಎಂದು ಆರೋಪಿಸಿದರು.
ಸಚಿವ ಜಮೀರ ಅಹ್ಮದ್ ಅವರು ರಾಜ್ಯಾದ್ಯಂತದ ಜಿಲ್ಲೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುತಿದ್ದಾರೆ. ಕೇಂದ್ರ ಸರ್ಕಾರದ ನೂತನ ಕಾಯ್ದೆ ಜಾರಿಗೆ ಮುನ್ನವೇ ರೈತರ ಆಸ್ತಿಗಳನ್ನು ವಕ್ಫ್ ಹೆಸರು ಸೇರಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿದರು.
ತಾಲೂಕಿನಲ್ಲಿ ಸಾಕಷ್ಟು ಜಮೀನುಗಳ ದಾಖಲೆಯಲ್ಲಿ ವಕ್ಫ್ ಹೆಸರು ದಾಖಲಾಗಿದೆ. ಈ ಕುರಿತು ಯಾರೂ ಧೈರ್ಯ ಕಳೆದುಕೊಳ್ಳಬಾರದು. ನಮ್ಮ ಬಳಿ ಬಂದು ದಾಖಲೆಗಳನ್ನು ನೀಡಿದರೆ ಅವುಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತೇವೆ ಎಂದರು.
ರಕ್ತ ಹರಿಸುತ್ತೇವೆ ಹೊರತು ರೈತರ ಒಂದಿಂಚೂ ಭೂಮಿಯನ್ನು ವಕ್ಫ್‌ಗೆ ಹೋಗುವುದಕ್ಕೆ ಬಿಡಲ್ಲ ಎಂದರು. ಆಸ್ತಿ ಮಾಲೀಕರಿಗೆ ಯಾವುದೆ ಮಾಹಿತಿ ನೀಡದೆ ವಕ್ಫ್ ಹೆಸರು ಸೇರಿಸುವ ಕ್ರಮ ಸರಿಯಿಲ್ಲ. ವಕ್ಪ್‌ನಲ್ಲಿ ಆಗಿರುವ ಹಗರಣದ ಬಗ್ಗೆ ಇಡಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ವಕ್ಫ್‌ಗೆ 56 ಸಾವಿರ ಎಕರೆ ಜಮಿನು ವಶಪಡಿಸಿಕೊಂಡಿದ್ದಾರೆ. ನೂರಾರು ಕೋಟಿ ರೂಗಳಷ್ಟು ಅವ್ಯವಹಾರವಾಗಿದೆ ಎಂದು ಅನ್ವರ್ ಮಣಿಪ್ಪಾಡಿ ಅವರು ವರದಿ ನೀಡಿದ್ದಾರೆ ಎಂದರು.
ಅಲ್ಪಸಂಖ್ಯಾತರ ನೂರಕ್ಕೆ ನೂರರಷ್ಟು ಮತಗಳನ್ನು ಪಡೆಯಲು ಷಢ್ಯಂತ್ರ ಮಾಡುತ್ತಿದ್ದಾರೆ. ತಾಲೂಕಿನ ತುಂಗಳ, ಸಾವಳಗಿ, ಗೋಠೆ ಸೇರಿ ವಿವಿಧ ಗ್ರಾಮಗಳಲ್ಲಿ ವಕ್ಫ್ ಹೆಸರು ಸೇರಿಸಿದ್ದಾರೆ. ಹೆಚ್ಚು ಕಮ್ಮಿ ಆಗಿದ್ದರೆ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯ ಮಾಡುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ. ಉಪಾಧ್ಯ ಮಾತನಾಡಿ, ರೈತರ ಜಮೀನು ಕಸಿದುಕೊಳ್ಳುವ ಕಾರ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಅಜಯ ಕಡಪಟ್ಟಿ, ಅರವಿಂದಗೌಡ ಪಾಟೀಲ, ಈಶ್ವರ ಆದೆಪ್ಪನವರ, ಸಂಗಮೇಶ ದಳವಾಯಿ, ಸುರೇಶಗೌಡ ಪಾಟೀಲ, ಧರ್ಮಲಿಂಗಯ್ಯ ಗುಡಗುಂಟಿ, ಗಣೇಶ ಶಿರಗಣ್ಣವರ, ರಾಕೇಶ ಲಾಡ, ಮಾಧ್ಯಮ ಸಂಚಾಲಕ ಶ್ರೀಧರ ಕಂಬಿ, ಶಂಕರ ಕಾಳೆ, ಮಲ್ಲು ದಾನಗೌಡ, ಪ್ರದೀಪ ನಂದೆಪ್ಪನವರ ಇತರರಿದ್ದರು.
ಮುಸ್ಲಿಮರು ದೇಶದಲ್ಲಿ ಎರಡ್ಮೂರು ಮದುವೆಯಾಗಿ ಡಜನ್‌ಗಟ್ಟಲೇ ಮಕ್ಕಳನ್ನು ಹೆಸರುತಿದ್ದಾರೆ. ದೇಶದಲ್ಲಿ ಅತಿವೇಗವಾಗಿ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಖ್ಯೆ ಹೆಚ್ಚಳವಾದರೆ ಮುಸ್ಲಿಮ್ ರಾಷ್ಟ್ರ ತನ್ನಿಂದ ತಾನೆ ಯಾಗುತ್ತದೆ ಎಂದುಕೊಂಡಿದ್ದಾರೆ. ಅವರು ಬದುಕಲಿಕ್ಕೆ ಅವರಿಗೆ ಜಾಗ ಇಲ್ಲ, ಅದಕ್ಕೆ ಹಿಂದುಗಳ ಜಾಗಗಳನ್ನು ಕಸಿದುಕೊಳ್ಳುವ ತಂತ್ರ ಅನಿಸುರಿಸುತ್ತಿದ್ದಾರೆ. -ನಾಡೋಜ ಜಗದೀಶ ಗುಡಗುಂಟಿ ಶಾಸಕರು ಜಮಖಂಡಿ.