ಜಿಲ್ಲೆ

ಕಾನೂನು ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಮಂಜುನಾಥ ಅಂಗಡಿ

ಧಾರವಾಡ: ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿಕೃತಿ ಮೆರೆದಿರುವ ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಽಕಾರಿ ಕಚೇರಿ ಎದುರು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸೀಮಾ ಮಸೂತಿ ನೇತೃತ್ವದಲ್ಲಿ ಜಿಲ್ಲಾಽಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.
ಉಡುಪಿ ಖಾಸಗಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ವಿಕೃತಿಯಿಂದ ರಾಜ್ಯ ತಲೆತಗ್ಗಿಸುವಂತಾಗಿದೆ. ಗೃಹಸಚಿವ ಡಾ. ಜಿ. ಪರಮೇಶ್ವರ್ ಈ ಘಟನೆಯನ್ನು ಹಗುರವಾಗಿ ಪರಿಗಣಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾಲತಿ ಹುಲಿಕಟ್ಟಿ, ಸೀಮಾ ಲದವಾ, ಅನುರಾಧಾ ಬ್ಯಾಲ್ಯಾಳ, ಪೂರ್ಣಿಮಾ ಇಡೂರ, ಸವಿತಾ ಚವ್ಹಾಣ, ಪ್ರತಿಭಾ ಪವಾರ, ಅಕ್ಕಮ್ಮ ಹೆಗಡೆ, ನೀಲವ್ವ ಅರವಳದ, ಚಂದ್ರಕಲಾ ಕೊಟಬಾಗಿ, ಸುನೀತಾ ಮಾಳವದಕರ, ಜ್ಯೋತಿ ಪಾಟೀಲ, ಶೋಭಾ ಬಿ., ರೇಣುಕಾ ಇರಕಲ್, ವಾಣಿಶ್ರೀ ಮೋಟೆಕರ, ಅಶ್ವಿನಿ ವೀರಾಪೂರ, ಸುವರ್ಣ ವಾಲಿ, ನಾಗರತ್ನಾ ಬಳ್ಳಾರಿ, ಮಾಲಾ ಸಣ್ಣಗೌಡ್ರ, ಇತರರಿದ್ದರು.