ಗುತ್ತಿಗೆ ನೀಡುವಲ್ಲಿ ಮುಸ್ಲಿಂರಿಗೆ ಶೇ. 4ರಷ್ಟು ಮೀಸಲಾತಿ ನಿರ್ಣಯ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಎಸ್​.ವಿ. ಸಂಕನೂರು, ಚಂದ್ರು ಲಮಾಣಿ, ರಾಜು ಕುರಡಗಿ, ವಿಜಯಕುಮಾರ ಗಡ್ಡಿ, ರಾವೇಂದ್ರ ಯಳವತ್ತಿ, ಎಂ. ಎಂ. ಹಿರೇಮಠ, ಮಂಜುನಾಥ ಮುಳಗುಂದ ಇತರರು ಇದ್ದರು. 
ಜಿಲ್ಲೆ

ಗುತ್ತಿಗೆ ನೀಡುವಲ್ಲಿ ಮುಸ್ಲಿಂರಿಗೆ ಶೇ. 4ರಷ್ಟು ಮೀಸಲಾತಿ ನಿರ್ಣಯ ಖಂಡಿಸಿ ಬಿಜೆಪಿ ಪ್ರತಿಭಟನೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಗುತ್ತಿಗೆ ನೀಡುವಲ್ಲಿ ಮುಸ್ಲಿಂರಿಗೆ ಶೇ. 4ರಷ್ಟು ಮೀಸಲಾತಿ ನಿರ್ಣಯ ಹಾಗೂ 18 ಜನ ಶಾಸಕರನ್ನ ಸದನದಿಂದ ಅಮಾನತ್ತು ಮಾಡಿದ ಸ್ಪೀಕರ್​ ನಿರ್ಣಯವನ್ನು ಖಂಡಿಸಿ ಭಾರತೀಯ ಜನತಾ ಪಾಟಿರ್ ಜಿಲ್ಲಾ ಟಕ ವತಿಯಿಂದ ಮಂಗಳವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿಧಾನ ಪರಿಷತ್​ ಶಾಸಕ ಎಸ್​.ವಿ. ಸಂಕನೂರು ಮಾತನಾಡಿ, ರಾಜ್ಯ ಕಾಂಗ್ರೆಸ್​ ಸರ್ಕಾರ ಎಲ್ಲ ೇತ್ರಗಳಲ್ಲಿ ವಿಲವಾಗಿದೆ. ಆಥಿರ್ಕವಾಗಿ ದಿವಾಳಿಯಾಗಿದೆ. ವಿರೋಧ ಪವಾದ ಭಾರತೀಯ ಜನತಾ ಪಾಟಿರ್ ಸರ್ಕಾರದ ಸರ್ವಾಧಿಕಾರಿ ನಿರ್ಣಯವನ್ನು ಖಂಡಿಸುತ್ತದೆ. ಇಂತಹ ಸಂದರ್ಭದಲ್ಲಿ ಸಭಾಧ್ಯರು ಪಾತೀತವಾಗಿ ನಿಯಮಾನುಸಾರ ನಿರ್ಣಯ ತೆಗೆದುಕೊಳ್ಳಬೇಕಾಗಿತ್ತು. ಆದರೆ ಅವರು ಈ ತರಹದ ನಿರ್ಣಯವನ್ನು ಯಾರ ಒತ್ತಡದಿಂದ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಮಾತನಾಡಿ ಅಲ್ಪಸಂಖ್ಯಾತರ ತುಷ್ಟಿಕರಣ ಮತ್ತು ಗುತ್ತಿಗೆಯಲ್ಲಿ ಅವರಿಗೆ ಮೀಸಲಾತಿ ನೀಡುವುದು ಸಂವಿಧಾನಬದ್ದ ಅಲ್ಲ. ಸಂವಿಧಾನದಲ್ಲಿ ಧರ್ಮ ಆದಾರಿತ ಮೀಸಲಾತಿಗೆ ಅವಕಾಶವಿಲ್ಲ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯ ರಾಜು ಕುರುಡಗಿ ರವರು ಸರ್ಕಾರದ ನಿರ್ಧಾರವನ್ನು ಖಂಡಿಸಿದರು. ಪ್ರತಿಭಟನೆ ನಂತರ ಮಾನವ ಸರಪಳಿಯನ್ನು ನಿಮಿರ್ಸಿ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ಮಾಡಲಾಯಿತು. ಸರ್ಕಾರದ ವಿರೋಧಿ ನೀತಿಯನ್ನು ಖಂಡಿಸಿ ಜಿಲ್ಲಾಧ್ಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶಿರ್ ಲಿಂಗರಾಜ ಪಾಟೀಲ, ಪಕ್ಕಿರೇಶ ರಟ್ಟಿಹಳ್ಳಿ, ಆರ್​. ಕೆ. ಚವ್ಹಾಣ, ನಾಗರಾಜ ಕುಲಕಣಿರ್, ಎಂ. ಎಸ್​. ಕರೀಗೌಡ್ರ, ಉಮೇಶಗೌಡ ಪಾಟೀಲ, ಎಂ.ಎಂ.ಹಿರೇಮಠ, ವಿಜಯಕುಮಾರ ಗಡ್ಡಿ, ಭೀಮಸಿಂಗ ರಾಠೋಡ, ಹೆಮಗಿರಿಶ ಹಾವಿನಾಳ, ರವಿ ದಂಡಿನ, ಚಂದ್ರು ತಡಸದ, ರಾವೇಂದ್ರ ಯಳವತ್ತಿ, ಮಂಜುನಾಥ ಮುಳಗುಂದ ಹಲವರು ಇದ್ದರು.