ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನವನ್ನು ಖಂಡಿಸಿ, ಬಿಡುಗಡೆಗೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಬಿಜೆಪಿ ಕಾರ್ಯಕರ್ತರು, ನಗರಸಭೆ ಸದಸ್ಯರು ಮನವಿ ಸಲ್ಲಿಸಿದರು. ಉಷಾ ದಾಸರ, ಅನಿಲ ಅಬ್ಬಿಗೇರಿ, ರಾವೇಂದ್ರ ಯಳವತ್ತಿ, ಮುತ್ತಣ್ಣ ಲಿಂಗಣ್ಣಗೌಡ್ರ ಇತರರು ಇದ್ದರು. 
ಜಿಲ್ಲೆ

ಗದಗ: ಶ್ರೀಕಾಂತ ಪೂಜಾರಿ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಜಿಲ್ಲಾಡಳಿತ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು, ನಗರಸಭೆ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿ ಭಟನೆ ವೇಳೆ ಪೊಲೀಸ್​ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ, ತಳ್ಳಾಟ ಜರುಗಿತು. ಜಿಲ್ಲಾಧಿಕಾರಿ ಕಚೇರಿ ಮುಖ್ಯ ಗೇಟ್​ ತಳ್ಳಿ ಒಳ ನುಗ್ಗಲು ಯತ್ನಿಸಿದ ಕಾರ್ಯಕರ್ತರು, ಕಾಂಗ್ರೆಸ್​ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಒಳನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಗೇಟ್​ ಹೊರಗಡೆಯೇ ತಡೆದ ಪೊಲೀಸರು ನಡೆಯುತ್ತಿದ್ದ ಹೈಡ್ರಾಮಾ ನಿಯಂತ್ರಿಸಲು ಯಶಸ್ವಿ ಆದರು. ಶ್ರೀಕಾಂತ ಪೂಜಾರಿ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ನಗರಸಭೆ ಅಧ್ಯೆ ಉಷಾ ದಾಸರ, ಶ್ರೀಕಾಂತ ಪೂಜಾರಿ ಒಬ್ಬ ಅಪ್ಪಟ ಹಿಂದು ಕಾರ್ಯಕರ್ತ. ರಾಮಭಕ್ತರೂ ಆಗಿದ್ದಾರೆ. ಅವರನ್ನು ಉದ್ದೇಶ ಪೂರಕ ಬಂಧಿಸಲಾಗಿದೆ. ಕಾಂಗ್ರೆಸ್​ ಸರ್ಕಾರ ತಮ್ಮ ಅಧಿಕಾರವನ್ನು ರ್ದುಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯೆ ಅನಿಲ ಅಬ್ಬಿಗೇರಿ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸರ ಮೇಲೆ ಒತ್ತಡ ಹಾಕಿ ಹಿಂದು ಕಾರ್ಯಕರ್ತರ ಬಂಧನ ಮಾಡಲಾಗುತ್ತಿದೆ. ಆಧಾರ ವಿಲ್ಲದೇ ಶಿವಮೊಗ್ಗ ಹಾಗು ಹುಬ್ಬಳ್ಳಿ ಕಾರ್ಯಕರ್ತರ ಬಂಧನವಾಗಿದೆ. ರಾಮ ಮಂದಿರದ ಉದ್ಘಾಟನೆ ಸಮೀಪಿಸುತ್ತಿದ್ದಂತೆ ಹಿಂದು ಕಾರ್ಯಕರ್ತರನ್ನು ಗುರಿಯಾಗಿಸಿ ಹಿಂದು ವಿರೋಧಿ ನೀತಿಯನ್ನು ಈ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಶ್ರೀಪತಿ ಉಡುಪಿ ಮಾತನಾಡಿ, ಆಧಾರ ರಹಿತವಾಗಿ ಕಾರ್ಯಕರ್ತರ ಬಂಧನ ಮಾಡುತ್ತಿರುವ ವಿಷಯವನ್ನು ಗಂಭೀರವಾಗಿ ಕೂಡಲೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲು ಸರ್ಕಾರಕ್ಕೆ ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯ ಮುತ್ತಣ್ಣ ಲಿಂಗನಗೌಡ್ರ, ಶ್ರೀಪತಿ ಉಡುಪಿ, ತೊಟಪ್ಪ ಕುಡರಗಿ, ರವಿ ದಂಡಿನ, ಸಿದ್ದು ಪಲ್ಲೇದ, ಉಷಾ ದಾಸರ, ಅಶೋಕ ನವಲಗುಂದ, ಅಶೋಕ ಸಂಕಣ್ಣವರ, ನಿಂಗಪ್ಪ ಮಣ್ಣೂರ, ಭದ್ರೇಶ ಕುಸ್ಲಾಪೂರ, ರಾವೇಂದ್ರ ಯಳವತ್ತಿ ಇತರರು ಇದ್ದರು.