ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ೪೨ ಕೋ.ರೂ. ನಗದು ಹಣ ಪತ್ತೆಯಾಗಿದ್ದು ಅದನ್ನು ಗುತ್ತಿಗೆದಾರರಿಂದ ಪಂಚರಾಜ್ಯಗಳ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಿದ ಹಣವಾಗಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು,
ಬಿಜೆಪಿ ಮಹಾನಗರ ಜಿಲ್ಲಾ ಘಟಕ ಹಾಗೂ ಗ್ರಾಮಾಂತರ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬಿಜೆಪಿ ಶಾಸಕರು, ಮಾಜಿÄ ಶಾಸಕರು, ಪ್ರಮುಖರು ಜಮಾಗೊಂಡು ಸುಮಾರು ಹೊತ್ತು ಪ್ರತಿಭಟನೆ ನಡೆಸಿ, ಗುತ್ತಿಗೆದಾರರಿಂದ ಎಲೆಕ್ಷನ್‌ಗಾಗಿ ಹಣ ಕಲೆಕ್ಷನ್ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಈ ಕುರಿತು ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಅಲ್ಲದೆ ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಬೇಕು, ಈ ಕುರಿತು ಉನ್ನತ ತನಿಖೆ ನಡೆಸಿ, ಹಣದ ಮೂಲ ಯಾವುದು ಎಂಬುದು ಪತ್ತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒಕ್ಕೋರಲಿನಿಂದ ಆಗ್ರಹಿಸಿದರು.
ಗುತ್ತಿಗೆದಾರ ಅಂಬಿಕಾಪತಿ ಐಟಿಯವರು ಶೋಧ ನಡೆಸಿದಾಗ ಮನೆಯಲ್ಲಿ ೪೨ ಕೋಟಿ ನಗದು ಹಣ ಸಿಕ್ಕಿದ್ದು, ಅದು ಕಮಿಷನ್ ರೂಪದಲ್ಲಿ ಸಂಗ್ರಹಿಸಿದ ಹಣವಾಗಿದೆ. ಹಿಂದೆ ಬಾಕಿ ಉಳಿದಿದ್ದ ೬೫೦ ಕೋ.ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಾಕಿ ಪಾವತಿಸಿದ್ದಕ್ಕಾಗಿ ಗುತ್ತಿಗೆದಾರರು ಮರಳಿ ನೀಡಿರುವ ಹಣವಾಗಿದೆ. ಘೋಷಣೆಯಾಗಿರುವ ಪಂಚ ರಾಜ್ಯಗಳ ಚುನಾವಣೆಯ ಖರ್ಚಿಗಾಗಿ ಕಳುಹಿಸಲು ಸಂಗ್ರಹಿಸಲಾಗಿದೆ ಎಂದು ಪ್ರತಿಭಟನೆಯನ್ನುz್ದÉÃಶಿಸಿ ಮಾತನಾಡಿದ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಶಾಸಕರಾದ ಬಸವರಾಜ ಮತ್ತಿಮಡು,ಡಾ.ಅವಿನಾಶ ಜಾಧವ, ಶಶೀಲ್ ನಮೋಶಿ, ಮಾಜಿ ಶಾಸಕ ಅಮರನಾಥ ಪಾಟೀಲ್, ಮುಖಂಡ ಮಣಿಕಂಠ ರಾಠೋಡ, ಅರುಣಕುಮಾರ ಪಾಟೀಲ್ ಮೊದಲಾದವರು ಕಿಡಿಕಾರಿದರು.
ಈಗ ಪತ್ತೆಯಾಗಿರುವುದು ಸ್ವಲ್ಪ ಹಣವಾಗಿದ್ದು, ಇದಲ್ಲದೆ ಇನ್ನೂ ಸಾವಿರಾರು ಕೋಟಿ ರೂ. ಸಂಗ್ರಹ ಮಾಡಿ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಖರ್ಚಿಗೆ ಕಳುಹಿಸಿಕೊಡಲು ಸಂಗ್ರಹ ಮಾಡಲಾಗುತ್ತಿದೆ. ಉಳಿದ ಮೊತ್ತ ಎಲ್ಲಿಡಲಾಗಿದೆ ಎಂಬುದು ಪತ್ತೆ ಜಪ್ತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಧರ್ಮಣ್ಣ ಇಟಗಾ,ಶರಣಪ್ಪ ತಳವಾರ, ಮಣಿಕಂಠÀ ರಾಠೋಡ, ಪರಸರೆಡ್ಡಿ, ಅರುಣಕುಮಾರ ಪಾಟೀಲ್, ಧಯಾಘನ್ ಧಾರವಾಡಕರ್, ಶಿವಾ ಅಷ್ಟಗಿ, ಮಲ್ಲಿಕಾರ್ಜುನ ಪಾಟೀಲ್ ಓಕಳಿ, ಬಸವರಾಜ, ಬಾಬುರಾವ ಬಸವಂತವಾಡಿ,ಬಾಬುರಾವ ಹಾಗರಗುಂಡಿ, ಸಂತೋಷ ಹಾದಿಮನಿ, ಸಂತೋಷ ಹಾದಿಮನಿ ಸೇಎರಿದಂತೆ ಅನೇಕರು ಪಾಲ್ಗೊಂಡಿದ್ದರು.