ಜಿಲ್ಲೆ

ಬಂಕಾಪುರ ಟೋಲ್​ನಲ್ಲಿ ಬಿಜೆಪಿ ಪ್ರತಿಭಟನೆ

ಬಸವರಾಜ ವೀರಪ್ಪ ಗರಗ

ಬಂಕಾಪುರ: ಬೆಳಗಾವಿಯಲ್ಲಿ ಎಂಎಲ್ಸಿ ಸಿ.ಟಿ. ರವಿ ಬಂಧನ ಖಂಡಿಸಿ ಬಂಕಾಪುರ ಟೋಲ್ ಹತ್ತಿರ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಬೆಂಗಳೂರು ಕಡೆ ಹೋಗುತ್ತಿದ್ದ ಸಿ.ಟಿ. ರವಿ ಅವರಿದ್ದ ವಾಹನ ತಡೆಯಲು ಮುಂದಾದ ಘಟನೆ ಶುಕ್ರವಾರ ನಡೆಯಿತು.

ಪೊಲೀಸರು ಸಿ.ಟಿ. ರವಿ ಅವರನ್ನು ಬೆಳಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಕರೆದೊಯ್ಯುತ್ತಿರುವ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು ಬಂಕಾಪುರ ಟೋಲ್​ನಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ವಿಷಯದ ಗಂಭೀರತೆ ಅರಿತ ಎಎಸ್ಪಿ ಲಕ್ಷ್ಮಣ ಶಿರಕೋಳ ನೇತೃತ್ವದ ತಂಡ ಪ್ರತಿಭಟನಾಕಾರರನ್ನು ತಡೆದು ಸಿ.ಟಿ. ರವಿ ಇದ್ದ ಕಾರನ್ನು ಹಾವೇರಿಯತ್ತ ಹೋಗಲು ಅನುವು ಮಾಡಿಕೊಟ್ಟರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕಾರ್ಯಕರ್ತರ ಬಳಿ ತೆರಳಿ ಶಾಂತತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ತಾಲೂಕಾಧ್ಯಕ್ಷ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಕಾಶಿನಾಥ ಕಳ್ಳಿಮನಿ, ರೇಣುಕನಗೌಡ ಪಾಟೀಲ, ಶಂಭಣ್ಣ ಕಡಕೋಳ, ನಾಗರಾಜ ಕೋರಿ, ಆಂಜನೇಯ ಹೊಸಮನಿ, ಹೊನ್ನಪ್ಪ ಹೂಗಾರ, ಸೋಮಶೇಖರ ಗೌರಿಮಠ, ಇದ್ದರು.