ಜಿಲ್ಲೆ

ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಧಾರವಾಡ: ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮಹಾನಗರ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ತೈಲ ಬೆಲೆ ಏರಿಕೆ ಮಾಡಿದೆ. ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಸರ್ಕಾರ ವಿವಿಧ ಯೋಜನೆಗಳ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸುತ್ತಿದೆ. ಇದರಿಂದ ಬಡವರ ಗಾಯದ ಮೇಲೆ ಬರೆ ಎಳೆದಿದೆ. ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಹಣ ಕಿತ್ತು ಕೊಳ್ಳುವ ಕೆಲಸ ಮಾಡುತ್ತಿದೆ. ಕೂಡಲೇ ಇಂಧನ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜ್ಯುಬಿಲಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ವಿಜಯಾನAದ ಶೆಟ್ಟಿ, ಶಿವು ಹಿರೇಮಠ, ಬಸವರಾಜ ಗುಂಡಗೋವಿ, ಮೋಹನ ರಾಮದುರ್ಗ, ಪವನ ಥಿಟೆ, ಅಮಿತ ಪಾಟೀಲ, ನಿಜನಗೌಡ ಪಾಟೀಲ, ಶ್ರೀನಿವಾಸ ಕೋಟ್ಯಾನ್, ಪ್ರಮೋದ ಕಾರಕೂನ, ಮಂಜುನಾಥ ಹೆಬಸೂರ, ಜ್ಯೋತಿ ಪಾಟೀಲ, ಚಂದ್ರಕಲಾ ಕೊಟಬಾಗಿ, ಪುಷ್ಪಾ ಮಜ್ಜಗಿ, ರೂಪಾ ಚೌಧರಿ, ಬಸವರಾಜ ಬಾಳಗಿ, ಇತರರಿದ್ದರು.