ಜಿಲ್ಲೆ

ದೇಶ ವಿರೋಧಿ ಮತ್ತು ದೇಶ ವಿಭಜನೆ ಖಂಡಿಸಿ ಬಿಜೆಪಿಯಿಂದ ಜಾಗ್ರತಾ ಪಾದಯಾತ್ರೆ

Gadag - Shivanand Hiremath

ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ದೇಶ ವಿರೋಧಿ ಮತ್ತು ದೇಶ ವಿಭಜನೆ ಖಂಡಿಸಿ ಬಿಜೆಪಿ ವತಿಯಿಂದ ಜಾಗ್ರತಾ ಪಾದಯಾತ್ರೆ ಮಾಡಲಾಯಿತು.
ರಾಜ್ಯದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಕೃತ್ಯಗಳು, ಘೊಷಣೆಗಳು ಹಾಗೂ ದೇಶ ವಿಭಜನೆಯ ಹೇಳಿಕೆಗಳನ್ನು ಖಂಡಿಸಿ, ದೇಶಭಕ್ತಿ ಜಾಗೃತಿಯ ನಿಟ್ಟಿನಲ್ಲಿ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ೩ನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರ ನೀಡಲು ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾ ವತಿಯಿಂದ ತಿರಂಗಾ ಯಾತ್ರೆ ಹಾಗೂ ಮಹಿಳಾ ಮೋರ್ಚಾ ವತಿಯಿಂದ ನಾರಿ ಶಕ್ತಿವಂದನ ನವ ರಾಷ್ಟçÀ್ಟ್ರಕ್ಕಾಗಿ ಮೋದಿ ಜಿ ಅವರು ಗೆಲುವಿಗಾಗಿ ಪಾದಯಾತ್ರಯನ್ನು ಗದಗ ನಗರದ ಭೂಮರೆಡ್ಡಿ ಸರ್ಕಲ್ ದಿಂದಾ ಪ್ರಾರಂಭವಾಗಿ ಟಾಂಗಾಕೊಟ ವರೆಗೆ ಜರುಗಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾಧ್ಯಕ್ಷರಾದ ಶ್ರೀ ರಾಜು ಕುರುಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಕ್ಕಿರೇಶ್ ರಟ್ಟಿಹಳ್ಳಿ, ಶ್ರೀ ಲಿಂಗರಾಜ್ ಪಾಟೀಲ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಭಾರತಿ ಅಳವಂಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀ ಸಂತೋಷ ಅಕ್ಕಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ಕೊಳ್ಳಿ, ಪಕ್ಷದ ಹಿರಿಯರಾದ ಕಾಂತೀಲಾಲ ಬನ್ಸಾಲಿ, ಸಿದ್ದು ಪಲ್ಲೇದ, ನಗರಸಭಾ ಅಧ್ಯಕ್ಷರಾದ ಉಷಾ ದಾಸರ, ಇರ್ಷಾದ ಮಾನ್ವಿ, ಅನಿಲ ಅಬ್ಬಿಗೇರಿ, ದೇವಪ್ಪ ಗೊಟೂರ, ಅಶೋಕ ಸಂಕಣ್ಣವರ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಗಂಗಾಧರ ಹಬೀಬ, ಅಶೋಕ ಕರೂರ, ಅಪ್ಪಣ್ಣ ಟೆಂಗಿನಕಾಯಿ, ಅಶೋಕ ಕರೂರ, ಅಮರನಾಥ ಬೆಟಗೇರಿ, ಶಿವು ಹಿರೇಮನಿಪಾಟಿಲ, ಸುಧೀರ ಕಾಟಿಗರ, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ರವರು ಮತ್ತೊಮ್ಮೆ ಪ್ರಧಾನಮಂತ್ರಿಗಳಾಗಲಿ ಎಂದು ತಮಿಳು ನಾಡಿನಿಂದ ದಿಲ್ಲಿಯವರೆಗೆ ಬೈಕ್ ಸವಾರಿ ಬಂದ ವೀರ ಮಹಿಳೆ ಮಾತಾ ರಾಜಲಕ್ಷಿö್ಮÃ ಮಂದಾ ರವರಿಗೆ ಸನ್ಮಾನಿಸಿದರು.