ಜಿಲ್ಲೆ

ಗದಗ: ಬಿಜೆಪಿ ಪ್ರತಿಭಟನೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯದಲ್ಲಿ ಕನಾನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಟಕದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆರ್ಸ್​ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಭ್ರೂಣ ಹತ್ಯೆಯ ಜಾಲಗಳು ತಾಂಡವಾಡುತ್ತಿರುವ ಟನೆಗಳು ಬೆಳಕಿಗೆ ಬಂದಿವೆ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದೇ ಕಣ್ಣಿಗೆ ಕಾಣದಂತೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬೆಳಗಾವಿಯ ವಂಟಿಮೂರಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಟನೆ ದೇಶಾದ್ಯಂತ ಚರ್ಚೆಗೆ ಒಳಪಟ್ಟಿದೆ. ಸಂತ್ರಸ್ತೆಯನ್ನು ಮುಖ್ಯಮಂತ್ರಿ ಸಿದ್ರಾಮಯ್ಯನವರು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಸರ್ಕಾರ ದಲಿತರ ಕುರಿತು ಮೊಸಳೆ ಕಣ್ಣೀರು ಹಾಕುತ್ತಿದೆ. ಅಧಿವೇಶನದಲ್ಲಿ ಪಾಲ್ಗೊಳಲು ಸರ್ಕಾರವೇ ಬೆಳಗಾವಿಗೆ ಆಗಮಿಸಿದ ಸಂದರ್ಬದಲ್ಲಿ ಇಂಥ ಟನೆ ನಡೆದಿರುವುದು ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ ಎಂದು ಗದಗ ಜಿಲ್ಲಾ ಬಿಜೆಪಿ ಆರೋಪಿಸಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯ ಮುತ್ತಣ್ಣ ಲಿಂಗನಗೌಡ್ರ, ಎಂ. ಎಸ್​. ಕರೀಗೌಡ್ರ, ಕಾಂತೀಲಾಲ ಬನ್ಸಾಲಿ, ಜಗನ್ನಾಥಸಾ ಭಾಂಡಗೆ, ರಾಜು ಕುರಡಗಿ, ಅನೀಲ ಅಬ್ಬಿಗೇರಿ, ಎಂ. ಎಂ. ಹಿರೇಮಠ, ಶಿವು ಹಿರೇಮನಿಪಾಟೀಲ, ಭದ್ರೇಶ ಕುಸ್ಲಾಪೂರ, ಛಗನ ರಾಜಪುರೋಹಿತ, ಮಾಂತೇಶ ನಲವಡಿ, ಪ್ರಕಾಶ ಅಂಗಡಿ, ಅಶೋಕ ಕುಡತಿನಿ ಹಲವರು ಇದ್ದರು.