ದೇವನಹಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಭೆಯನ್ನು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಿದರು. ರಾಜ್ಯ ಕೋಶಾಧ್ಯಕ್ಷ ಕೆ.ನಾಗೇಶ್, ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಮಾಜಿ ಅಧ್ಯ ಕ್ಷ ಎ.ವಿ. ನಾರಾಯಣಸ್ವಾಮಿ , ಜಿಲ್ಲಾ ಪ್ರಧಾನಕಾರ್ಯದರ್ಶಿ ಎಚ್.ಎಂ, ರವಿಕುಮಾರ್, ರಾಜ್ಯ ಸಮಿತಿ ಸದಸ್ಯ ಎ.ಸಿ.ಗುರುಸ್ವಾಮಿ, ಜಿಲ್ಲಾ ಮಹಿಳಾ ಪ್ರಧಾನಕಾರ್ಯದರ್ಶಿ ನಾಗವೇಣಿ ಇದ್ದರು. 
ಜಿಲ್ಲೆ

ತಾಲೂಕಿನಲ್ಲಿ 15 ಸಾವಿರ ನೋಂದಣಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ತಾಲೂಕಿನಲ್ಲಿ ಇದುವರೆಗೆ ಬಿಜೆಪಿಗೆ 15 ಸಾವಿರಕ್ಕೂ ಅಧಿಕ ಸದಸ್ಯತ್ವ ನೋಂದಣಿಯಾಗಿದ್ದು ಅಭಿಯಾನ ಮುಗಿಯುವ ಹೊತ್ತಿಗೆ ಕನಿಷ್ಠ 50 ಸಾವಿರ ಬಿಜೆಪಿ ಪ್ರಾಥಮಿಕ ಸದಸ್ಯತ್ವ ನೀಡಿ ನೋಂದಾಯಿಸಿಕೊಳ್ಳುವ ಕಡೆ ಮುಖಂಡರು ಕಾರ್ಯಪ್ರವೃತ್ತರಾಗಬೇಕು ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಈ ಕ್ಷೇತ್ರದಲ್ಲಿ ಬಲಿಷ್ಠ ನಾಯಕತ್ವದ ಕೊರತೆ ಇದೆ ಜತೆಗೆ ಇದರ ಇದುವರೆಗೆ ಬಿಜೆಪಿಯಿಂದ ಶಾಸಕರಾಗಿ ಯಾರೂ ಚುನಾಯಿತರಾಗದೇ ಇರುವುದೂ ಸದಸ್ಯತ್ವ ನೋಂದಣಿ ಸ್ವಲ್ಪಮಟ್ಟದಲ್ಲಿ ಕಡಿಮೆಯಾಗಲು ಕಾರಣವಾಗಿದೆ ಎಂದರು. ಒಮ್ಮೆ ಇಲ್ಲಿಂದ ಬಿಜೆಪಿಯಿಂದ ಚುನಾಯಿತರಾದರೆ ಇಲ್ಲಿ ನಾಯಕತ್ವ ಬೆಳೆಯಲಿದೆ ಮತ್ತು ಸದಸ್ಯತ್ವ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕರ್ತರು, ಮುಖಂಡರು ಅದರಲ್ಲೂ ಮಹಿಳಾ ಕಾರ್ಯಕರ್ತರು ಉತ್ಸುಕರಾಗಿ ಕೆಲಸ ಮಾಡುತ್ತಿದ್ದು 50 ಸಾವಿರ ಗುರಿ ಮುಟ್ಟುವ ವಿಶ್ವಾಸವಿದೆ ಎಂದರು.
ಹಿಂದೆಯೇ ಆಗಬೇಕಿತ್ತು: ಜಾತಿ ಜಾತಿಗಣತಿ ಈ ಹಿಂದೆಯೇ ಮಾಡಬೇಕಿತ್ತು ರಾಜ್ಯದ ಜನರ ಹಾಗೂ ಪ್ರತಿಪಕ್ಷದವರ ಗಮನ ಬೆರೇಡೆ ಸೆಳೆಯಲು ಈಗ ಜಾತಿಗಣತಿ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಜಾತಿ ಗಣತಿ ಮಾಡಿದರೆ ಯಾವ ಜಾತಿ ಎಷ್ಟಿದೆ ಎಂದು ತಿಳಿಯಲಿದೆ ತಪ್ಪೇನಿಲ್ಲ, ಆದರೆ ಯಾವುದೂ ಒಂದರೆಡು ಜಾತಿಯನ್ನು ಗುರಿ ಮಾಡಿ ಗಣತಿ ಮಾಡಿಸುವ ಉದ್ದೇಶ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿ ಇವರದೇ ಸರ್ಕಾರ ತನಿಖಾಧಿಕಾರಿಗಳು ಇವರ ಸರ್ಕಾರದ ಅಧೀನಕ್ಕೆ ಒಳಪಡುವುದರಿಂದ ಸಿದ್ದಾರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೆ ತನಿಖೆಯ ಮೇಲೆ ಪ್ರಭಾವ ಬೀರಿ ತನಿಖೆ ದಿಕ್ಕು ತಪ್ಪಿಸಬಹುದು ಹಾಗಾಗಿ ಇವರ ರಾಜೀನಾಮೆ ನೀಡಿ ಸತ್ಯಾಸತ್ಯತೆಯ ತನಿಖೆಗೆ ಸಹಕರಿಸುವುದು ಸೂಕ್ತ ಎಂದರು .