ಜಿಲ್ಲೆ

ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು: ರವಿ ದಂಡಿನ

Gadag - Shivanand Hiremath

ವಿಶ್ವವೇ ಬೆರಗಾಗುವಂತೆ ಭಾರತವನ್ನು ಬೆಳಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಾತಿ ವಿಷಯವಾಗಿ ನಿಂದನೆ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆ ಖಂಡನೀಯ ಎಂದು ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ದಂಡಿನ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಾತಿ ನಿಂದನೆ ಮಾಡಿದ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು. ನರೇಂದ್ರ ಮೋದಿ ಅವರು ಗುಜರಾತಿನ ತೇಲಿ(ಗಾಣಿಗ) ಸಮಾಜದಿಂದ ಬಂದವರು. ಜಾತಿಯಿಂದ ರಾಜಕಾರಣ ಮಾಡುವ ದುಸ್ಥತಿ ಬಿಜೆಪಿಗೆ ಇಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಬ್ರಮ ನಿರಸ ಆಗಿದೆ. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಸಿಗುತ್ತಿಲ್ಲ. ಹಾಗಾಗಿ ಮೋದಿ ಅವರ ಜಾತಿ ವಿಷಯ ತೆಗೆದರೇ ಇತರೆ ಜಾತಿಗಳ ಲಾಭ ಆಗುತ್ತದೆ ಎಂದು ಊಹಿಸಿಕೊಂಡಿದ್ದಾರೆ. ಇದೇ ರೀತಿ ರಾಹುಲ್ ಗಾಂಧಿ ತಮ್ಮ ಹೇಳಿಕೆ ಮುಂದು ವರಿಸಿದರೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶ್ರೀಪತಿ ಉಡುಪಿ ಮಾತನಾಡಿ, ರಾಹುಲ್ ಗಾಂಧಿ ಅವರು ಅಪ್ರಭುದ್ಧ ಹೇಳಿಕೆ ನೀಡುತ್ತ ನೀಚಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಮೋದಿ ಅವರು ಯಾವುದೇ ಬಹಿರಂಗ ಸಮಾವೇಶದಲ್ಲಿ ಯಾವುದೇ ಜಾತಿ ಬಗ್ಗೆ ಚಕಾರ ಎತ್ತುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಅಭಿವೃದ್ಧಿ ಪಥದತ್ತ ರಾಷ್ಟ್ರವನ್ನು ಮೋದಿ ಮುನ್ನಡೆಸುತ್ತಿದ್ದಾರೆ. ಆದರೆ, ಅವರ ಘನತೆಗೆ ಕಪ್ಪು ಮಸಿ ಬಳೆಯುವ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ ಎಂದರು.

ಶ್ರೀಪತಿ ಉಡುಪಿ, ಅಶೋಕ ಹೆಬ್ಬಳ್ಳಿ, ಸುರೇಶ್ ಮಾಳಪ್ಪನ್ನವರ ಇತರರು ಇದ್ದರು