ಜಿಲ್ಲೆ

ಪುತ್ತೂರು ಶಾಸಕರದು ನಕಲಿ ಹಿಂದುತ್ವ - ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಆರೋಪ

Mangaluru - Nishantha Narayana

ಪುತ್ತೂರು: ಮುಸಲ್ಮಾನರನ್ನು ತುಷ್ಟೀಕರಣ ಮಾಡುವ ಭರದಲ್ಲಿ ಬಡ ಹಾಗೂ ಹಿಂದುಳಿದ ಮುಸಲ್ಮಾನರ ಅನುಕೂಲಕ್ಕಾಗಿ ಕೇಂದ್ರ ಜಾರಿಗೊಳಿಸಿದ ವಕ್ ತಿದ್ದುಪಡಿ ಮಸೂದೆ ಬುಡಮೇಲು ಮಾಡುತ್ತೇನೆ ಎಂದು ಪುತ್ತೂರು ಶಾಸಕ ನೀಡಿರುವ ಹೇಳಿಕೆ ಖಂಡನಾರ್ಹ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಹೇಳಿದರು.

ಶಾಸಕರಿಗೆ, ಕಾಂಗ್ರೆಸಿಗರಿಗೆ ಮುಸ್ಲಿಮರು ವೋಟ್ ಬ್ಯಾಂಕ್ ಆಗಿದ್ದು, ಬಡ ಮುಸ್ಲಿಮರ ಅವರ ತಲೆ ಕೆಡಿಸುವಲ್ಲಿ ನಿರತರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಕೇಸರಿ ಶಾಲು ಧರಿಸಿ ನಕಲಿ ಹಿಂದು ಮುಖವಾಡ ಧರಿಸಿರುವ ಶಾಸಕರ ಅಸಲಿ ಮುಖ ಪ್ರದರ್ಶನವಾಗಿದೆ. ಚುನಾವಣೆ ಸಂದರ್ಭ ಹಿಂದುಗಳ ರಕ್ಷಿಸುತ್ತೇನೆ ಎಂದ ಶಾಸಕರು ಈಗ ಹಿಂದುಗಳಿಗೆ ಕಿರುಕುಳ ನೀಡಿ ಸಂತೋಷಪಡುತ್ತಿದ್ದಾರೆ. ಗೋವಿನ ಹತ್ಯೆ, ಹಿಂದುಗಳ ಮೇಲೆ ಹಲ್ಲೆ ಹಾಗೂ ಹತ್ಯೆ ನಡೆದಾಗ ಸಮುದಾಯದ ಪರ ನಿಲ್ಲುವುದೇ ಹಿಂದುತ್ವ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಪುತ್ತೂರು ಬಿಜೆಪಿ ಮಾಧ್ಯಮ ವಕ್ತಾದ ಮಹೇಶ್ ರೈ ಉಪಸಸ್ಥಿತರಿದ್ದರು.