ಜಿಲ್ಲೆ

ಹಿಂದು ಸಂಪ್ರದಾಯ ಮೊಟಕುಗೊಳಿಸುವ ಹುನ್ನಾರ : ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪ

Mangaluru - Hariprasad Rai

ಮಂಗಳೂರು : ಕಾನೂನಿನ ನೆಪವೊಡ್ಡಿ ಪೊಲೀಸ್ ಇಲಾಖೆಯು ಹಿಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕವನ್ನು ರಾತ್ರಿ 10 ಘಂಟೆ ಬಳಿಕ ಬಳಸಲು ಅವಕಾಶ ನೀಡದೆ ಇರುವ ಕ್ರಮ ಅತಿರೇಕದ ಹಿಂದು ವಿರೋಧಿ ನಡೆಯಾಗಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದು ಧರ್ಮದ ಹಬ್ಬಗಳಾದ ಮೊಸರುಕುಡಿಕೆ, ಗಣೇಶೋತ್ಸವ, ನವರಾತ್ರಿ, ದಸರಾ, ದೀಪಾವಳಿ, ಶಿವರಾತ್ರಿ ಆಚರಣೆ ರಾತ್ರಿ ವೇಳೆ ನಡೆಯುತ್ತದೆ. ಕೋಲ,ನೇಮ, ಯಕ್ಷಗಾನ, ನಾಗಮಂಡಲಗಳು ಕೂಡಾ ರಾತ್ರಿಯಲಿ ನಡೆಯುತ್ತದೆ. ಇವುಗಳಿಗೆ ತನ್ನದೇ ಕಟ್ಟುಪಾಡುಗಳಿವೆ. ಕಾನೂನಿನ ಹೆಸರಲ್ಲಿ ಅವುಗಳನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವುದು ನಮ್ಮ ಸಂಪ್ರದಾಯ, ಪರಂಪರೆಗಳನ್ನು ಛಿದ್ರಗೊಳಿಸುವ ಹುನ್ನಾರವಾಗಿದೆ ಎಂದು ಅವರು ಹೇಳಿದ್ದಾರೆ
ವಿಚಾರವಾದಿಗಳಿಗೆ ಹಿಂದು ಹಬ್ಬಗಳೇ ಕಾಣುವುದು. ಗಣೇಶೋತ್ಸವ ಬಂದರೆ ನೀರು ಕಲುಷಿತವಾಗುತ್ತದೆ, ದೀಪಾವಳಿ ಬಂದಾಗ ಪರಿಸರ ಮಾಲಿನ್ಯವಾಗುತ್ತದೆ. ನಾನೂ ಹಿಂದು,ನನ್ನ ಹೆಸರಲ್ಲೇ ದೇವರ ಹೆಸರಿದೆ ಎಂದು ಹೇಳುವ ಸಿದ್ದರಾಮಯ್ಯ, ಪರಮೇಶ್ವರ ಕೋಲ,ನೇಮಗಳಿಗೆ ಭೇಟಿ ನೀಡುವ ಸ್ಪೀಕರ್ ಖಾದರ್ ಅವರಿಗೆ ಇಲ್ಲಿ ಆಗುತ್ತಿರುವ ತಾರತಮ್ಯ ಧೋರಣೆ ಕಾಣುವುದಿಲ್ಲವೇ ಎಂದು
ಸತೀಶ್ ಕುಂಪಲ ಪ್ರಶ್ನಿಸಿದ್ದಾರೆ.