ವಿಜಯವಾಣಿ ಸುದ್ದಿಜಾಲ ಕಲಬುರಗಿ
ಯುವ ನೇತಾರರಾಗಿರುವ ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಚಂದು ಪಾಟೀಲ ಅವರ ಜನ್ಮ ದಿನವನ್ನು ಭಾನುವಾರ ನಗರದಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಬಡವರಿಗೆ ಹಾಸಿಗೆ, ಹೊದಿಕೆ ಹಾಗೂ ಹೆಣ್ಣು ಮಕ್ಕಳಿಗೆ ಸೀರೆಗಳ ವಿತರಣೆ ಮಾಡಲಾಯಿತು. ಬಡ ರೋಗಿಗಳಿಗೆ ಹಣ್ಣ-ಹಂಪಲು ವಿತರಿಸಲಾಯಿತು. ರಕ್ತದಾನ ಶಿಬಿರ, ಹಲವು ಕಡೆ ಅನ್ನ ದಾಸೋಹ ನಡೆಸಲಾಯಿತು. ಅನಾಥ ಮಕ್ಕಳಿಗೆ ಬಟ್ಟೆ, ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಮೊದಲಾದವನ್ನು ವಿತರಿಸುವ ಮೂಲಕ ಪಾಟೀಲ್‌ರ ಜನ್ಮ ದಿನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದರು.
ಚಂದು ಪಾಟೀಲ್ ಅಭಿಮಾನಿಗಳ ಬಳಗದ ವತಿಯಿಂದ ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಾಗೂ ಹೊದಿಕೆ ವಿತರಿಸಲಾಯಿತು. ಉಪ ಮಹಾಪೌರ ಶಿವಾನಂದ ಪಿಸ್ತಿ, ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ವರದಾಶಂಕರ್ ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯರಾದ ಸಚಿನ್ ಕಡಗಂಚಿ, ಮಂಜುನಾಥ ಕಳಸ್ಕರ್, ಜಗದೇವ ಗುತ್ತೇದಾರ, ದಿಗಂಬರ್ ಮಾಗಣಗೇರಿ, ಮುಖಂಡರಾದ ಅಶೊಕ ಮಾನಕರ, ಬಸವರಾಜ ಮುನ್ನಳ್ಳಿ, ಮಲ್ಲಿಕಾರ್ಜುನ ಓಕಳಿ, ಸಂಗಮೇಶ ಮನ್ನಳ್ಳಿ, ವಿಜಯಕುಮಾರ್ ಬಂಗಾರು, ಗಂಗಾಧರ ಬಿಲಗುಂದಿ, ಶಾಂತು ದುಧನಿ, ವಿಜಯಕುಮಾರ್ ಮುನ್ನಳ್ಳಿ, ಮಹೇಶ ಚವ್ಹಾಣ, ಚನ್ನು ಭಂಗೆ ಸೇರಿದಂತೆ ಅನೇಕರು ಇದ್ದರು.
ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಚಂದು ಪಾಟೀಲ್ ಸ್ಥಳೀಯವಾಗಿ ಲಭ್ಯವಿರಲಿಲ್ಲ.ಕುಟುಂಬದ ಸದಸ್ಯರೊಂದಿಗೆ ಪುಣ್ಯಸ್ಥಳಗಳಿಗೆ ಭೇಟಿ ನೀಡಿದರು.