ಜಿಲ್ಲೆ

ಅವಹೇಳನ ಬ್ಯಾನರ್ ಅವಳವಡಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

Mangaluru - Nishantha Narayana

ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಬಸ್ ನಿಲ್ದಾಣದ ಬಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬೆಜೆಪಿ ರಾಜ್ಯಾಧ್ಯಕ್ಷ ಅವರಿಗೆ ಅವಹೇಳನ ಮಾಡಿ ಬ್ಯಾನರ್ ಅವಳವಡಿಸಿದ ಬಗ್ಗೆ ನಗರ ಠಾಣೆಗೆ ದೂರು ನೀಡಿ, ಮಿನಿವಿಧಾನ ಸೌಧದ ಬಳಿಯಲ್ಲಿ ಪ್ರತಿಭಟಣೆಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆಸಲಾಯಿತು.

ಬಿಜೆಪಿ ಪರಾಜಿತ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಣಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ನಗರ ಬಿಜೆಪಿ ಅಧ್ಯಕ್ಷಾ ಜಗನ್ನಿವಾಸ ರಾವ್, ನಗರ ಸಭೆ ಅಧ್ಯಕ್ಷ ಜೀವಂದರ ಜೈನ್, ಜಿಲ್ಲಾ ಉಪಾಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.